ಉಕ್ಕಿ ಹರಿಯುತ್ತಿರುವ ದೂದ್ ಗಂಗಾ ನದಿ, ಪ್ರವಾಹ ಭೀತಿಯಲ್ಲಿ ನದಿಪಾತ್ರದ ಗ್ರಾಮಸ್ಥರು
ಮಹಾರಾಷ್ಟ್ರದಲ್ಲಿ ಈಗಲೂ ಮಳೆ ಸುರಿಯುತ್ತಿರುವುದರಿಂದ ದೂದ್ ಗಂಗಾ ನದಿಗೆ ಮತ್ತಷ್ಟು ನೀರು ಹರಿದು ಬರೋದು ನಿಶ್ಚಿತ. ಹಾಗಾದಲ್ಲಿ ಈಗ ಕೇವಲ ಹೊಲಗದ್ದೆಗಳಿಗೆ ನುಗ್ಗಿರುವ ನೀರು ಗ್ರಾಮಗಳಿಗೂ ನುಗ್ಗಲಿದೆ. ಬೆಳೆಗಳನ್ನು ಕಳೆದುಕೊಳ್ಳುವ ಆತಂಕದಲ್ಲಿರುವ ಗ್ರಾಮಸ್ಥರಲ್ಲಿ ಪ್ರವಾಹದ ಭೀತಿಯೂ ಮನೆ ಮಾಡಿದೆ.
ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಅಂಕೆಮೀರಿದ ಮಳೆಯಿಂದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪ ವಿಭಾಗ ಮೂಲಕ ಹರಿಯುವ ದೂದ್ ಗಂಗಾ ನದಿ ಉಕ್ಕಿಹರಿಯುತ್ತಿದೆ. ನಿಪ್ಪಾಣಿ ತಾಲೂಕಿನ ಬೆಂಕಿಹಾಳ್ ಗ್ರಾಮದಲ್ಲಿ ನದಿಯ ನೀರು ನದಿಪಾತ್ರದ ಇಕ್ಕೆಲಗಳಲ್ಲಿ ಒಂದು ಕಿಮೀನಷ್ಟು ಹರಡಿ ಹರಿಯುತ್ತಿದೆ. ಗ್ರಾಮದ ಹೊಲಗದ್ದೆಗಳಿಗೆ ನೀರು ಹರಿದಿದೆ ಮತ್ತು ಕಬ್ಬು ಹಾಗೂ ಇತರ ಬೆಳೆಗಳು ಸಂಪೂರ್ಣವಾಗಿ ನಾಶವಾಗುವ ಭೀತಿ ರೈತರಲ್ಲಿ ಉಂಟಾಗಿದೆ ಎಂದು ನಮ್ಮ ಬೆಳಗಾವಿ ವರದಿಗಾರ ಹೇಳುತ್ತಾರೆ. ಜಮೀನುಗಳಲ್ಲಿ ಅಳವಡಿಸಿಕೊಂಡಿದ್ದ ಪಂಪ್ ಸೆಟ್ ಗಳು ನದಿ ನೀರಲ್ಲಿ ಕೊಚ್ಚಿ ಹೋಗಬಾರದೆನ್ನುವ ಕಾರಣಕ್ಕೆ ರೈತರು ತಮ್ಮದೇ ಆದ ವಿಧಾನ ಅನುಸರಿಸಿರುವುದನ್ನು ದೃಶ್ಯಗಳಲ್ಲಿ ನೋಡಬಹದು. ಬೆಂಕಿಹಾಳ್ ಗ್ರಾಮದಲ್ಲಿ ನದಿಪಾತ್ರದಲ್ಲಿರುವ ಕಬ್ಬಿನ ಗದ್ದೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ವಿದ್ಯುತ್ ಪೂರೈಕೆಗೆ ಸ್ಥಾಪಿಸಲಾಗಿರುವ ಸಬ್-ಸ್ಟೇಶನ್ ಅನ್ನು ಸಹ ನೀರು ಆವರಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಗೆ ಬೆಳಗಾವಿಯಲ್ಲಿ ಮಹಾ ಪ್ರವಾಹದ ಆತಂಕ