ಸೂಕ್ತ ರಸ್ತೆ ಇಲ್ಲದೆ ಡೋಲಿಯಲ್ಲಿ ಮಹಿಳೆಯನ್ನು ಹೊತ್ತು ಆಸ್ಪತ್ರೆಗೆ ಕರೆತಂದ ಸ್ಥಳೀಯರು; ವಿಡಿಯೋ ನೋಡಿ
ಸಮರ್ಪಕ ರಸ್ತೆ ಸಂಪರ್ಕ ಇಲ್ಲದ ಕಾರಣ ಡೋಲಿ ಕಟ್ಟಿ ಮಹಿಳೆಯನ್ನು ಹೆಗಲ ಮೇಲೆ ಹೊತ್ತು ತಂದಿದ್ದಾರೆ. ದೊಡ್ಡಾಣೆ ಗ್ರಾಮದಲ್ಲಿ ಬಾವಿಯಿಂದ ನೀರು ಹೊತ್ತು ಬರುತ್ತಿದ್ದ ವೇಳೆ ಮಹದೇವಮ್ಮ ಎಂಬ ಮಹಿಳೆ ಮೇಲೆ ಹಂದಿ ದಾಳಿ ನಡೆಸಿದೆ.
ಚಾಮರಾಜನಗರ: ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ ಆಸ್ಪತ್ರೆಗೆ ಹೋಗಲು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯ ಗ್ರಾಮಸ್ಥರು ತೀರ ಪರದಾಡುತ್ತಿದ್ದಾರೆ. ಹಂದಿ ದಾಳಿಯಿಂದ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ರಸ್ತೆ ವ್ಯವಸ್ಥೆಯಿಲ್ಲ. ಹೀಗಾಗಿ ಸ್ಥಳೀಯರು ಸೇರಿ ಡೋಲಿಯಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಸಮರ್ಪಕ ರಸ್ತೆ ಸಂಪರ್ಕ ಇಲ್ಲದ ಕಾರಣ ಡೋಲಿ ಕಟ್ಟಿ ಮಹಿಳೆಯನ್ನು ಹೆಗಲ ಮೇಲೆ ಹೊತ್ತು ತಂದಿದ್ದಾರೆ. ದೊಡ್ಡಾಣೆ ಗ್ರಾಮದಲ್ಲಿ ಬಾವಿಯಿಂದ ನೀರು ಹೊತ್ತು ಬರುತ್ತಿದ್ದ ವೇಳೆ ಮಹದೇವಮ್ಮ ಎಂಬ ಮಹಿಳೆ ಮೇಲೆ ಹಂದಿ ದಾಳಿ ನಡೆಸಿದೆ. ಕಾಲು ಮುರಿದು ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಆದರೆ ಆಸ್ಪತ್ರೆಗೆ ಹೋಗಲು ಸಮರ್ಪಕ ರಸ್ತೆಯಿಲ್ಲ.
ಇದನ್ನೂ ಓದಿ
ಇಂಡಿಯಾ ಗೇಟ್‌ನಲ್ಲಿ ಎರಡು ದಿನಗಳ ‘ಸ್ವರ್ಣಿಮ್ ವಿಜಯ್ ಪರ್ವ್’ ಉದ್ಘಾಟಿಸಿದ ರಾಜನಾಥ್ ಸಿಂಗ್
ಶತಕ ದಾಟಿದ ತರಕಾರಿಗಳ ಬೆಲೆ! ಬೆಂಗಳೂರಿನಲ್ಲಿ ತರಕಾರಿಗಳ ದರ ಹೀಗಿದೆ ನೋಡಿ
Latest Videos