‘ಜಗಳ ಆದ್ರೂ ಜೊತೆಗೆ ನಿಂತಿದ್ದೇವೆ’; ಗೆಳೆಯ ವಿನಯ್​ನ ಬಿಟ್ಟುಕೊಡದ ಕಾರ್ತಿಕ್​

‘ಜಗಳ ಆದ್ರೂ ಜೊತೆಗೆ ನಿಂತಿದ್ದೇವೆ’; ಗೆಳೆಯ ವಿನಯ್​ನ ಬಿಟ್ಟುಕೊಡದ ಕಾರ್ತಿಕ್​

ಮದನ್​ ಕುಮಾರ್​
|

Updated on: Jan 25, 2024 | 8:29 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋ ಮುಗಿಯಲು ಇನ್ನು ಮೂರು ದಿನಗಳು ಮಾತ್ರ ಬಾಕಿ ಇವೆ. ಈ ಸಂದರ್ಭದಲ್ಲಿ ಇಡೀ ಜರ್ನಿಯನ್ನು ಕಾರ್ತಿಕ್​ ಮಹೇಶ್​ ಮೆಲುಕು ಹಾಕಿದ್ದಾರೆ. ಈಗಾಗಲೇ ಎಲಿಮಿನೇಟ್​ ಆಗಿರುವ ತನಿಷಾ ಕುಪ್ಪಂಡ ಮತ್ತು ಸಿರಿ ಅವರನ್ನು ಕಾರ್ತಿಕ್​ ನೆನಪಿಸಿಕೊಂಡಿದ್ದಾರೆ. ಅದೇ ರೀತಿ ವಿನಯ್​ಗೂ ಅವರು ಧನ್ಯವಾದ ಹೇಳಿದ್ದಾರೆ.

ಕಾರ್ತಿಕ್​ ಮಹೇಶ್​ ಮತ್ತು ವಿನಯ್​ ಗೌಡ (Vinay Gowda) ಅವರು ಬಿಗ್​ ಬಾಸ್​ ಮನೆಗೆ ಬರುವುದಕ್ಕೂ ಮೊದಲೇ ಸ್ನೇಹಿತರಾಗಿದ್ದರು. ಆದರೆ ಬಿಗ್ ಬಾಸ್​ ಮನೆಯೊಳಗೆ ಬಂದ ಬಳಿಕ ಅವರ ಸ್ನೇಹದಲ್ಲಿ ಸಣ್ಣ ಬಿರುಕು ಮೂಡಿತ್ತು. ಟಾಸ್ಕ್​ ಮತ್ತು ಇನ್ನಿತರೆ ಸಂದರ್ಭಗಳಲ್ಲಿ ಕಾರ್ತಿಕ್​ ಮತ್ತು ವಿನಯ್​ ಜಗಳ ಮಾಡಿಕೊಂಡಿದ್ದರು. ಕೈ ಕೈ ಮಿಲಾಯಿಸುವ ಹಂತಕ್ಕೆ ಅವರ ಜಗಳ ಹೋಗಿತ್ತು. ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಶೋ ಮುಗಿಯಲು ಇನ್ನು ಮೂರು ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಇಡೀ ಜರ್ನಿಯನ್ನು ಕಾರ್ತಿಕ್​ ಮಹೇಶ್​ ಮೆಲುಕು ಹಾಕಿದ್ದಾರೆ. ಈಗಾಗಲೇ ಎಲಿಮಿನೇಟ್​ ಆಗಿರುವ ತನಿಷಾ ಕುಪ್ಪಂಡ ಮತ್ತು ಸಿರಿ ಅವರನ್ನು ಕಾರ್ತಿಕ್​ ನೆನಪಿಸಿಕೊಂಡಿದ್ದಾರೆ. ಅದೇ ರೀತಿ ವಿನಯ್​ಗೂ ಧನ್ಯವಾದ ಹೇಳಿದ್ದಾರೆ. ‘ಇಷ್ಟೆಲ್ಲ ಜಗಳ ಆದರೂ ಕೂಡ ಇಂದಿಗೂ ಜೊತೆಗೆ ನಿಂತಿದ್ದೇವೆ. ಅದಕ್ಕೆ ನಮ್ಮ ಆ ಫೋಟೋ ಸಾಕ್ಷಿ’ ಎಂದು ಕಾರ್ತಿಕ್​ (Karthik Mahesh) ಹೇಳಿದ್ದಾರೆ. ಈ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ. ‘ಜಿಯೋ ಸಿನಿಮಾ’ದಲ್ಲಿ ಉಚಿತವಾಗಿ ದಿನದ 24 ಗಂಟೆಯೂ ಬಿಗ್​ ಬಾಸ್​ ಕಾರ್ಯಕ್ರಮವನ್ನು ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ