ಜೆಡಿಎಸ್ ಗೆ ಮಂಡ್ಯ ಕ್ಷೇತ್ರವೇ ಯಾಕೆ ಬಿಟ್ಟುಕೊಡಬೇಕು? ಬಿಜೆಪಿ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧಿಸಲಿ: ಕೆಸಿ ನಾರಾಯಣಗೌಡ

ಜೆಡಿಎಸ್ ಗೆ ಮಂಡ್ಯ ಕ್ಷೇತ್ರವೇ ಯಾಕೆ ಬಿಟ್ಟುಕೊಡಬೇಕು? ಬಿಜೆಪಿ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧಿಸಲಿ: ಕೆಸಿ ನಾರಾಯಣಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 25, 2024 | 7:08 PM

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಂಡ್ಯದಲ್ಲಿ ಬಿಜೆಪಿಯ ವೋಟ್ ಬೇಸ್ ಹೆಚ್ಚುತ್ತಲೇ ಇದೆ. ಮೊದಲೆಲ್ಲ 30,000-40,000 ವೋಟು ಸಿಗುತ್ತಿದ್ದ ಬಿಜೆಪಿಗೆ ಈಗ 2 ಲಕ್ಷಕ್ಕೂ ಮಿಗಿಲಾಗಿ ವೋಟು ಸಿಗುತ್ತಿವೆ, ಹಾಗಾಗಿ ಮೇಡಂ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿದರೆ ನಿಚ್ಚಳ ಬಹುಮತದೊಂದಿಗೆ ಗೆಲ್ಲಲಿದ್ದಾರೆ ಎಂದು ಅವರು ಹೇಳಿದರು.

ಬೆಂಗಳೂರು: ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್ ಪಕ್ಷಕ್ಕೆ (JDS) ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮಂಡ್ಯ ಕ್ಷೇತ್ರವನ್ನೇ ಯಾಕೆ ಬಿಟ್ಟು ಕೊಡಬೇಕು? ರಾಜ್ಯದಲ್ಲಿ 28 ಕ್ಷೇತ್ರಗಳಿವೆ ಬೇರೆ ಕ್ಷೇತ್ರಗಳನ್ನು ಆರಿಸಿಕೊಳ್ಳಲಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಧುರೀಣ ಕೆಸಿ ನಾರಾಯಣ ಗೌಡ (KC Narayana Gowda) ಹೇಳಿದರು. ಬೆಂಗಳೂರಲ್ಲಿಂದು ಮಂಡ್ಯದ ಪಕ್ಷೇತರ ಸಂಸದೆಯಾಗಿರುವ ಸುಮಲತಾ ಅಂಬರೀಶ್ (Sumalatha Ambareesh) ಅವರನ್ನು ಭೇಟಿಯಾಗಲು ಬಂದಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೌಡರು, ಮಂಡ್ಯ ಕ್ಷೇತ್ರದಿಂದ ಸುಮಲತಾ ಮೇಡಂ ಅವರೇ ಸ್ಪರ್ಧಿಸಲಿ ಅಂತ ಅವರನ್ನು ಕೋರಲು ಇಲ್ಲಿಗೆ ಬಂದಿದ್ದೇವೆ ಎಂದರು. ಕುಮಾರಸ್ವಾಮಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು ಮತ್ತು ಅವರನ್ನು ಕೇಂದ್ರದಲ್ಲಿ ಸಚಿವ ಮಾಡುವ ಮಾತುಗಳು ಕೇಳಿಬರುತ್ತಿರೋದು ಸರಿ, ಅದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ.

ಆದರೆ ಮಂಡ್ಯದಿಂದ ಸುಮಲತಾ ಮೇಡಂ ಅವರೇ ಸ್ಪರ್ಧಿಸಬೇಕು, ಬಿಜೆಪಿ ಟಿಕೆಟ್ ಗಾಗಿ ತಾವು ವರಿಷ್ಠರೊಂದಿಗೆ ಚರ್ಚಿಸುತ್ತೇವೆ ಎಂದು ನಾರಾಯಣ ಗೌಡ ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಂಡ್ಯದಲ್ಲಿ ಬಿಜೆಪಿಯ ವೋಟ್ ಬೇಸ್ ಹೆಚ್ಚುತ್ತಲೇ ಇದೆ. ಮೊದಲೆಲ್ಲ 30,000-40,000 ವೋಟು ಸಿಗುತ್ತಿದ್ದ ಬಿಜೆಪಿಗೆ ಈಗ 2 ಲಕ್ಷಕ್ಕೂ ಮಿಗಿಲಾಗಿ ವೋಟು ಸಿಗುತ್ತಿವೆ, ಹಾಗಾಗಿ ಮೇಡಂ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿದರೆ ನಿಚ್ಚಳ ಬಹುಮತದೊಂದಿಗೆ ಗೆಲ್ಲಲಿದ್ದಾರೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ