Video:ಬೈಕ್​ನಿಂದ ಬಿದ್ದಿದ್ದ ಸವಾರನ ಮೇಲೆ ಹರಿದ ಬಸ್; ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

Video:ಬೈಕ್​ನಿಂದ ಬಿದ್ದಿದ್ದ ಸವಾರನ ಮೇಲೆ ಹರಿದ ಬಸ್; ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 25, 2024 | 7:19 PM

ಹುಮನಾಬಾದ್(Humnabad) ರಸ್ತೆಯಲ್ಲಿ ಆಟೋ ಟಚ್​ ಆಗಿ ಬೈಕ್​ನಿಂದ ಬಿದ್ದಿದ್ದ ಸವಾರನ ಮೇಲೆ  ಕೆಎಸ್​​ಆರ್​​ಟಿಸಿ ಬಸ್ ಹರಿದು ಬೈಕ್​ ಸವಾರ ಮೃತಪಟ್ಟ ಘಟನೆ ನಡೆದಿದೆ. ಸೋಮಶೇಖರ್(34) ಮೃತ ರ್ದುದೈವಿ.

ಕಲಬುರಗಿ, ಜ.25: ಕಲಬುರಗಿ ನಗರದ ಹುಮನಾಬಾದ್(Humnabad) ರಸ್ತೆಯಲ್ಲಿ ಆಟೋ ಟಚ್​ ಆಗಿ ಬೈಕ್​ನಿಂದ ಬಿದ್ದಿದ್ದ ಸವಾರನ ಮೇಲೆ  ಕೆಎಸ್​​ಆರ್​​ಟಿಸಿ ಬಸ್ ಹರಿದು ಬೈಕ್​ ಸವಾರ ಮೃತಪಟ್ಟ ಘಟನೆ ನಡೆದಿದೆ. ಸೋಮಶೇಖರ್(34) ಮೃತ ರ್ದುದೈವಿ. ದಾಲ್‌ ಮೀಲ್‌ನಲ್ಲಿ ಕೆಲಸ ಮುಗಿಸಿ ಬೈಕ್‌ನಲ್ಲಿ ಹೊರಟಿದ್ದ ಸೋಮಶೇಖರ್, ಇತ್ತ ಬೀದರ್ ಕಡೆಯಿಂದ ಕಲಬುರಗಿ ಕಡೆಗೆ ಬರುತ್ತಿದ್ದ KSRTC ಬಸ್ ನಡುವೆ ಈ ದುರಂತ ಸಂಭವಿಸಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ