‘ಜಗಳ ಆದ್ರೂ ಜೊತೆಗೆ ನಿಂತಿದ್ದೇವೆ’; ಗೆಳೆಯ ವಿನಯ್​ನ ಬಿಟ್ಟುಕೊಡದ ಕಾರ್ತಿಕ್​

Updated on: Jan 25, 2024 | 8:29 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋ ಮುಗಿಯಲು ಇನ್ನು ಮೂರು ದಿನಗಳು ಮಾತ್ರ ಬಾಕಿ ಇವೆ. ಈ ಸಂದರ್ಭದಲ್ಲಿ ಇಡೀ ಜರ್ನಿಯನ್ನು ಕಾರ್ತಿಕ್​ ಮಹೇಶ್​ ಮೆಲುಕು ಹಾಕಿದ್ದಾರೆ. ಈಗಾಗಲೇ ಎಲಿಮಿನೇಟ್​ ಆಗಿರುವ ತನಿಷಾ ಕುಪ್ಪಂಡ ಮತ್ತು ಸಿರಿ ಅವರನ್ನು ಕಾರ್ತಿಕ್​ ನೆನಪಿಸಿಕೊಂಡಿದ್ದಾರೆ. ಅದೇ ರೀತಿ ವಿನಯ್​ಗೂ ಅವರು ಧನ್ಯವಾದ ಹೇಳಿದ್ದಾರೆ.

ಕಾರ್ತಿಕ್​ ಮಹೇಶ್​ ಮತ್ತು ವಿನಯ್​ ಗೌಡ (Vinay Gowda) ಅವರು ಬಿಗ್​ ಬಾಸ್​ ಮನೆಗೆ ಬರುವುದಕ್ಕೂ ಮೊದಲೇ ಸ್ನೇಹಿತರಾಗಿದ್ದರು. ಆದರೆ ಬಿಗ್ ಬಾಸ್​ ಮನೆಯೊಳಗೆ ಬಂದ ಬಳಿಕ ಅವರ ಸ್ನೇಹದಲ್ಲಿ ಸಣ್ಣ ಬಿರುಕು ಮೂಡಿತ್ತು. ಟಾಸ್ಕ್​ ಮತ್ತು ಇನ್ನಿತರೆ ಸಂದರ್ಭಗಳಲ್ಲಿ ಕಾರ್ತಿಕ್​ ಮತ್ತು ವಿನಯ್​ ಜಗಳ ಮಾಡಿಕೊಂಡಿದ್ದರು. ಕೈ ಕೈ ಮಿಲಾಯಿಸುವ ಹಂತಕ್ಕೆ ಅವರ ಜಗಳ ಹೋಗಿತ್ತು. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಶೋ ಮುಗಿಯಲು ಇನ್ನು ಮೂರು ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಇಡೀ ಜರ್ನಿಯನ್ನು ಕಾರ್ತಿಕ್​ ಮಹೇಶ್​ ಮೆಲುಕು ಹಾಕಿದ್ದಾರೆ. ಈಗಾಗಲೇ ಎಲಿಮಿನೇಟ್​ ಆಗಿರುವ ತನಿಷಾ ಕುಪ್ಪಂಡ ಮತ್ತು ಸಿರಿ ಅವರನ್ನು ಕಾರ್ತಿಕ್​ ನೆನಪಿಸಿಕೊಂಡಿದ್ದಾರೆ. ಅದೇ ರೀತಿ ವಿನಯ್​ಗೂ ಧನ್ಯವಾದ ಹೇಳಿದ್ದಾರೆ. ‘ಇಷ್ಟೆಲ್ಲ ಜಗಳ ಆದರೂ ಕೂಡ ಇಂದಿಗೂ ಜೊತೆಗೆ ನಿಂತಿದ್ದೇವೆ. ಅದಕ್ಕೆ ನಮ್ಮ ಆ ಫೋಟೋ ಸಾಕ್ಷಿ’ ಎಂದು ಕಾರ್ತಿಕ್​ (Karthik Mahesh) ಹೇಳಿದ್ದಾರೆ. ಈ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ. ‘ಜಿಯೋ ಸಿನಿಮಾ’ದಲ್ಲಿ ಉಚಿತವಾಗಿ ದಿನದ 24 ಗಂಟೆಯೂ ಬಿಗ್​ ಬಾಸ್​ ಕಾರ್ಯಕ್ರಮವನ್ನು ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More