‘ವಿನಯ್, ನಮ್ರತಾ ನಿಯಮ ಪಾಲಿಸಿಲ್ಲ’; ಇಬ್ಬರನ್ನೂ ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಟ್ಟ ಸ್ನೇಹಿತ್
ಕ್ಯಾಪ್ಟನ್ಸಿ ಟಾಸ್ಕ್ನಿಂದ ಯಾರನ್ನು ಹೊರಗೆ ಇಡಬೇಕು ಎನ್ನುವ ವಿಚಾರ ಬಂದಾಗ ಅವರು ವಿನಯ್ ಹಾಗೂ ನಮ್ರತಾ ಹೆಸರನ್ನು ತೆಗೆದುಕೊಂಡಿದ್ದಾರೆ. ಅವರು ನಿಯಮ ಪಾಲಿಸಿಲ್ಲ ಎನ್ನುವ ಕಾರಣ ನೀಡಿದ್ದಾರೆ.
ಸ್ನೇಹಿತ್, ವಿನಯ್ ಹಾಗೂ ನಮ್ರತಾ ಮಧ್ಯೆ ಗಾಢವಾದ ಫ್ರೆಂಡ್ಶಿಪ್ ಬೆಳೆದಿದೆ. ಈ ವಾರ ಸ್ನೇಹಿತ್ (Snehith Gowda) ಕ್ಯಾಪ್ಟನ್ ಆಗಿದ್ದಾರೆ. ಪ್ರತಿ ಆಟಕ್ಕೂ ಅವರದ್ದೇ ಉಸ್ತುವಾರಿ. ಕ್ಯಾಪ್ಟನ್ಸಿ ಟಾಸ್ಕ್ನಿಂದ ಯಾರನ್ನು ಹೊರಗೆ ಇಡಬೇಕು ಎನ್ನುವ ವಿಚಾರ ಬಂದಾಗ ಅವರು ವಿನಯ್ ಹಾಗೂ ನಮ್ರತಾ ಹೆಸರನ್ನು ತೆಗೆದುಕೊಂಡಿದ್ದಾರೆ. ಅವರು ನಿಯಮ ಪಾಲಿಸಿಲ್ಲ ಎನ್ನುವ ಕಾರಣ ನೀಡಿದ್ದಾರೆ. ಇದಕ್ಕೆ ವಿನಯ್ ಹಾಗೂ ನಮ್ರತಾ ಸಿಟ್ಟಾಗಿದ್ದಾರೆ. ‘ಅವನು ಯಾವ ಪುಟಗೋಸಿ ಫ್ರೆಂಡ್’ ಎಂದು ನಮ್ರತಾ ಕಣ್ಣೀರು ಹಾಕಿದ್ದಾರೆ. ಇವರ ಫ್ರೆಂಡ್ಶಿಪ್ನಲ್ಲಿ ಬಿರುಕು ಮೂಡುವ ಸೂಚನೆ ಸಿಕ್ಕಿದೆ. ಜಿಯೋ ಸಿನಿಮಾ ಹಾಗೂ ಕಲರ್ಸ್ ಕನ್ನಡದಲ್ಲಿ ಇಂದು (ಡಿಸೆಂಬರ್ 8) ಈ ಎಪಿಸೋಡ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ