ಚಪ್ಪಲಿ ಎಸೆತ ಪ್ರಕರಣ: ‘ಕಾರ್ತಿಕ್ ತಪ್ಪಿಲ್ಲ’ ಎಂದ ಮೈಕಲ್; ವಿನಯ್ ಕೆಂಡಾಮಂಡಲ

ಕಾರ್ತಿಕ್ ಹಾಗೂ ವಿನಯ್ ಮಧ್ಯೆ ಕಿರಿಕ್ ಆಗಿದೆ. ಈ ವೇಳೆ ಕಾರ್ತಿಕ್ ಅವರು ಧರಿಸಿದ್ದ ಚಪ್ಪಲಿಯನ್ನು ನೆಲಕ್ಕೆ ಬೀಸೆ ಎಸೆದಿದ್ದಾರೆ. ದುರಾದೃಷ್ಟಕ್ಕೆ ಅದು ನಿಲಕ್ಕೆ ಬಡಿದು ವಿನಯ್​ಗೆ ತಾಗಿದೆ. ಇದರಿಂದ ವಿನಯ್ ಸಿಟ್ಟಾಗಿದ್ದಾರೆ.

ಚಪ್ಪಲಿ ಎಸೆತ ಪ್ರಕರಣ: ‘ಕಾರ್ತಿಕ್ ತಪ್ಪಿಲ್ಲ’ ಎಂದ ಮೈಕಲ್; ವಿನಯ್ ಕೆಂಡಾಮಂಡಲ
ಸ್ನೇಹಿತ್-ಮೈಕಲ್
Follow us
ರಾಜೇಶ್ ದುಗ್ಗುಮನೆ
|

Updated on: Dec 08, 2023 | 8:14 AM

ಬಿಗ್ ಬಾಸ್ ಮನೆಯಲ್ಲಿ ವಿನಯ್ (Vinay Gowda) ಅವರು ಕೆಂಡಾಮಂಡಲ ಆಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಚಪ್ಪಲಿ ಎಸೆತ ಪ್ರಕರಣ. ಕಾರ್ತಿಕ್ ಕೋಪದಲ್ಲಿ ಎಸೆದಿದ್ದ ಚಪ್ಪಲಿ ವಿನಯ್​ಗೆ ತಾಗಿದೆ. ‘ನನಗೆ ಚಪ್ಪಲಿಯಲ್ಲಿ ಹೊಡೆದೆಯಾ’ ಎಂದು ವಿನಯ್ ಕೂಗಾಡಿದ್ದಾರೆ. ಆದರೆ, ಇದರಲ್ಲಿ ಕಾರ್ತಿಕ್ ಅವರ ತಪ್ಪಿಲ್ಲ ಎಂದು ವಿನಯ್​ಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಮೈಕಲ್ ಮಾಡಿದ್ದಾರೆ. ಇದರಿಂದ ವಿನಯ್ ಮತ್ತಷ್ಟು ಸಿಟ್ಟಾಗಿದ್ದಾರೆ.

ವಿನಯ್ ಹಾಗೂ ಕಾರ್ತಿಕ್ ಈ ಬಾರಿ ಒಂದೇ ತಂಡದಲ್ಲಿ ಇದ್ದಾರೆ. ಆದರೆ, ಮೈಕಲ್ ಉಳಿದವರಂತೆ ಅಲ್ಲ. ವಿನಯ್ ಟೀಂನಲ್ಲಿ ಇದ್ದ ಮಾತ್ರಕ್ಕೆ ಅವರು ಹೇಳಿದ್ದೆಲ್ಲ ಸರಿ ಎಂದು ಕುಣಿಯುವುದಿಲ್ಲ. ತಪ್ಪಿದ್ದರೆ ಅದನ್ನು ತಪ್ಪು ಎಂದೇ ಹೇಳುತ್ತಾರೆ. ಕಾರ್ತಿಕ್ ಎಸೆದ ಚಪ್ಪಲ್ಲಿ ಆಕಸ್ಮಿಕವಾಗಿ ತಾಗಿದೆ ಎಂಬುದನ್ನು ಮೈಕಲ್ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಇದು ವಿನಯ್​ಗೆ ಖುಷಿ ನೀಡಿಲ್ಲ.

ಕಾರ್ತಿಕ್ ಹಾಗೂ ವಿನಯ್ ಮಧ್ಯೆ ಕಿರಿಕ್ ಆಗಿದೆ. ಈ ವೇಳೆ ಕಾರ್ತಿಕ್ ಅವರು ಧರಿಸಿದ್ದ ಚಪ್ಪಲಿಯನ್ನು ನೆಲಕ್ಕೆ ಬೀಸಿ ಎಸೆದಿದ್ದಾರೆ. ದುರಾದೃಷ್ಟಕ್ಕೆ ಅದು ನಿಲಕ್ಕೆ ಬಡಿದು ವಿನಯ್​ಗೆ ತಾಗಿದೆ. ಇದರಿಂದ ವಿನಯ್ ಸಿಟ್ಟಾಗಿದ್ದಾರೆ. ಕಾರ್ತಿಕ್​ಗೆ ಹೊಡೆಯಬೇಕು ಎಂಬಷ್ಟರಮಟ್ಟಿಗೆ ಅವರಿಗೆ ಕೋಪ ನೆತ್ತಿಗೆ ಏರಿತ್ತು. ಈ ಮಧ್ಯೆ ಮೈಕಲ್ ಆಡಿದ ಮಾತು ವಿನಯ್ ಅವರ ಕೋಪವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ‘ಲೇ ತಗಡು ಎದೆಮೇಲೆ ಕಾಲಿಟ್ಟೇ ನಿನ್ನ ತುಳಿಯೋದು’; ಕಾರ್ತಿಕ್​ಗೆ ವಿನಯ್ ಎಚ್ಚರಿಕೆ

‘ಆ ಮೈಕಲ್ ಮಾತನಾಡೋದು ನೋಡು, ಕಾರ್ತಿಕ್ ಚಪ್ಪಲಿಯನ್ನು ನೆಲಕ್ಕೆ ಎಸೆದಿದ್ದು, ಅದು ರಿಬೌಂಡ್ ಆಗಿ ನಿಮಗೆ ಬಂದಿದ್ದು ಎನ್ನುತ್ತಾನೆ’ ಎಂದು ವಿನಯ್ ಕೂಗಾಡಿದ್ದಾರೆ. ವಿನಯ್ ಅವರು ವಿಕ್ಟಿಮ್ ಕಾರ್ಡ್ ಪ್ಲೇ ಮಾಡಲು ಮುಂದಾಗಿದ್ದರು. ಇದಕ್ಕೆ ಮೈಕಲ್ ಬ್ರೇಕ್ ಹಾಕಿದ್ದಾರೆ. ಮೈಕಲ್ ಅವರನ್ನು ಎಲ್ಲರೂ ಈ ಕಾರಣಕ್ಕೆ ಪ್ರಶಂಸಿಸುತ್ತಿದ್ದಾರೆ. ಸದ್ಯ ಬಿಗ್ ಬಾಸ್ ಮನೆ ರಣರಂಗ ಆಗಿದೆ. ಗೇಮ್​ವೇಳೆ ಮನೆಯ ಸದಸ್ಯರಿಗೆ ಸಾಕಷ್ಟು ತೊಂದರೆಗಳು ಆಗಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ