‘ನಾವು ಆನೆ ವಿರೋಧಿಗಳಲ್ಲ, ಆನೆಗೆ ಹೆದರೋದು ಇಲ್ಲ’; ಕ್ಯಾಪ್ಟನ್ ಆದ ವಿನಯ್​ಗೆ ಸಂಗೀತಾ ತಿರುಗೇಟು

|

Updated on: Nov 03, 2023 | 9:08 AM

ವಿನಯ್ ಅವರು ಸಂತೋಷ್ ಅವರನ್ನು ಸೋಲಿಸಿ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆದ ಬಳಿಕ ‘ಆನೆ ಬಂತೊಂದಾನೆ’ ಎಂದು ಹಾಡು ಹೇಳಿದ್ದಾರೆ. ಇದಕ್ಕೆ ಸಂಗೀತಾ ರಿಯಾಕ್ಷನ್ ನೀಡಿದ್ದಾರೆ.

ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ (Sangeetha Sringeri) ಮಧ್ಯೆ ಇರುವ ವೈರುಧ್ಯದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇಬ್ಬರೂ ಎದುರು ಬದುರು ಬಂದರೆ ಸಾಕು ಕಿತ್ತಾಟ ಫಿಕ್ಸ್. ಈಗ ವಿನಯ್ ಅವರು ಸಂತೋಷ್ ಅವರನ್ನು ಸೋಲಿಸಿ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆದ ಬಳಿಕ ‘ಆನೆ ಬಂತೊಂದಾನೆ’ ಎಂದು ಹಾಡು ಹೇಳಿದ್ದಾರೆ. ಇದಕ್ಕೆ ಸಂಗೀತಾ ರಿಯಾಕ್ಷನ್ ನೀಡಿದ್ದಾರೆ. ‘ನಾವು ಆನೆ ವಿರೋಧಿಗಳಲ್ಲ, ಹಾಗಂತ ಆನೆಗೆ ಹೆದರೋದು ಇಲ್ಲ’ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ಸದ್ಯ ಈ ಪ್ರೋಮೋ ವೈರಲ್ ಆಗುತ್ತಿದೆ. ಕಲರ್ಸ್ ಕನ್ನಡದಲ್ಲಿ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. 24 ಗಂಟೆ ಲೈವ್ ವೀಕ್ಷಿಸಲು ಜಿಯೋ ಸಿನಿಮಾದಲ್ಲಿ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ