ಬಿಗ್ ಬಾಸ್ ಮನೆಗೆ ವಿನಯ್ ಪತ್ನಿ ಎಂಟ್ರಿ; ನೇರವಾಗಿ ಸಂಗೀತಾ ಜತೆ ಮಾತಿಗಿಳಿದ ಅಕ್ಷತಾ
ವಿನಯ್ ಗೌಡ ಅವರ ಪತ್ನಿ ಅಕ್ಷತಾ ಈಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಮೊದಲು ವಿನಯ್ ಜೊತೆ ಮಾತನಾಡಿ, ನಂತರ ಅವರು ಸಂಗೀತಾ ಶೃಂಗೇರಿ ಕಡೆ ಮುಖ ಮಾಡಿದ್ದಾರೆ. ‘ಸಂಗೀತಾ.. ನಿಮ್ಮ ಜೊತೆ ಮಾತಾಡಬೇಕು’ ಎಂದು ಅಕ್ಷತಾ ಹೇಳಿದ್ದಾರೆ. ಅವರಿಬ್ಬರು ಮಾತನಾಡುವಾಗ ವಿನಯ್ ದೂರು ಕುಳಿತಿದ್ದಾರೆ.
ನಟ ವಿನಯ್ ಗೌಡ ಅವರು ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಸಂಗೀತಾ ಶೃಂಗೇರಿ (Sangeetha Sringeri) ಜೊತೆ ಆರಂಭದಲ್ಲಿ ವಿರೋಧ ಕಟ್ಟಿಕೊಂಡಿದ್ದರು. ಆದರೆ ಇತ್ತೀಚಿನ ವಾರಗಳಲ್ಲಿ ಅವರು ಸಾಫ್ಟ್ ಆಗಿ ನಡೆದುಕೊಳ್ಳುತ್ತಿದ್ದಾರೆ. ಈಗ ದೊಡ್ಮನೆಗೆ ಸ್ಪರ್ಧಿಗಳ ಕುಟುಂಬದರು ಬಂದಿದ್ದಾರೆ. ವಿನಯ್ ಗೌಡ ಅವರ ಪತ್ನಿ (Vinay Gowda Wife) ಅಕ್ಷತಾ ಕೂಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಮೊದಲು ವಿನಯ್ ಜೊತೆ ಮಾತನಾಡಿ, ನಂತರ ಅವರು ಸಂಗೀತಾ ಶೃಂಗೇರಿ ಕಡೆ ಮುಖ ಮಾಡಿದ್ದಾರೆ. ‘ಸಂಗೀತಾ.. ನಿಮ್ಮ ಜೊತೆ ಮಾತಾಡಬೇಕು’ ಎಂದು ಅಕ್ಷತಾ ಹೇಳಿದ್ದಾರೆ. ಆ ಬಳಿಕ ಪ್ರತ್ಯೇಕವಾಗಿ ಅವರಿಬ್ಬರು ಮಾತುಕತೆ ನಡೆಸಿದ್ದಾರೆ. ಅವರಿಬ್ಬರು ಮಾತನಾಡುವಾಗ ವಿನಯ್ ದೂರು ಕುಳಿತಿದ್ದಾರೆ. ಈ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಡಿಸೆಂಬರ್ 28ರ ರಾತ್ರಿ 9.30ಕ್ಕೆ ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ದಿನದ 24 ಗಂಟೆಯೂ ಲೈವ್ ವೀಕ್ಷಿಸಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.