16 ವರ್ಷದ ಹುಡುಗನ ಪಾತ್ರಕ್ಕಾಗಿ ತೂಕ ಕಡಿಮೆ ಮಾಡಿಕೊಂಡ ವಿನಯ್ ರಾಜ್​ಕುಮಾರ್

Updated on: Jun 29, 2025 | 12:56 PM

‘ಅಂದೊಂದಿತ್ತು ಕಾಲ’ ಸಿನಿಮಾದಲ್ಲಿ ನಟ ವಿನಯ್ ರಾಜ್​ಕುಮಾರ್ ಅವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಶಾಲೆಯ ಹುಡುಗನ ಪಾತ್ರ ಮಾಡಿದ್ದಾರೆ. 16 ವರ್ಷ ವಯಸ್ಸಿನ ಹುಡುಗನ ರೀತಿ ಕಾಣಲು ಅವರು ದೇಹದ ತೂಕ ಕಡಿಮೆ ಮಾಡಿಕೊಂಡರು. ಆ ಬಗ್ಗೆ ಅವರು ಮಾತನಾಡಿದ್ದಾರೆ ನೋಡಿ..

ನಟ ವಿನಯ್ ರಾಜ್​ಕುಮಾರ್ ಅವರು ‘ಅಂದೊಂದಿತ್ತು ಕಾಲ’ (Andondittu Kaala) ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬಿಡುಗಡೆಗೆ ಸಿದ್ಧವಾಗುತ್ತಿರುವ ಈ ಸಿನಿಮಾದಲ್ಲಿ ಅವರು ಶಾಲೆಯ ಹುಡುಗನ ಪಾತ್ರವನ್ನು ಮಾಡಿದ್ದಾರೆ. 16 ವರ್ಷ ವಯಸ್ಸಿನ ಹುಡುಗನ ರೀತಿ ಕಾಣಲು ಅವರು ದೇಹದ ತೂಕ ಕಡಿಮೆ ಮಾಡಿಕೊಂಡಿದ್ದರು. ಆ ಕುರಿತು ಮಾತನಾಡಿದ್ದಾರೆ. ‘ಒಂದಷ್ಟು ತೂಕ ಕಡಿಮೆ ಮಾಡಿಕೊಂಡೆ. ಚಿಕ್ಕ ಹುಡುಗನ ಮುಗ್ಧತೆ ತೋರಿಸಬೇಕಿತ್ತು. 16ನೇ ವಯಸ್ಸು ಅಂದರೆ ತುಂಬಾ ಕಡಿಮೆ. ನಾನು ಹಾಗೆ ಕಾಣಿಸಲ್ಲ ಅಂದುಕೊಂಡಿದ್ದೆ. ಆದರೆ ಆ ಲುಕ್ ಎಲ್ಲರಿಗೂ ಇಷ್ಟ ಆಗಿದೆ. ಎಲ್ಲರೂ ಪಾಸಿಟಿವ್ ಪ್ರತಿಕ್ರಿಯೆ ಕೊಟ್ಟಿದ್ದಾರೆ’ ಎಂದು ವಿನಯ್ ರಾಜ್​ಕುಮಾರ್ (Vinay Rajkumar) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More