‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ತಂದೆಯ ಸ್ಮರಿಸಿದ ವಿನೋದ್ ಪ್ರಭಾಕರ್

Updated on: Jun 19, 2026 | 8:22 PM

ಬಹುನಿರೀಕ್ಷಿತ ‘ಬಲರಾಮನ ದಿನಗಳು’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ನಟ ವಿನೋದ್ ಪ್ರಭಾಕರ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಂದೆ ಟೈಗರ್ ಪ್ರಭಾಕರ್ ಅವರನ್ನು ವಿನೋದ್ ನೆನಪಿಸಿಕೊಂಡರು. ಸುದ್ದಿಗೋಷ್ಠಿಯ ವಿಡಿಯೋ ಇಲ್ಲಿದೆ. ಈ ಸಿನಿಮಾ ಜೂನ್ 26ರಂದು ರಿಲೀಸ್ ಆಗಲಿದೆ.

ಬಹುನಿರೀಕ್ಷಿತ ‘ಬಲರಾಮನ ದಿನಗಳು’ (Balaramana Dinagalu) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಂದೆ ಟೈಗರ್ ಪ್ರಭಾಕರ್ ಅವರನ್ನು ವಿನೋದ್ ನೆನಪಿಸಿಕೊಂಡರು. ‘ನಾನು ಇಲ್ಲಿ ನಿಂತಿದ್ದಕ್ಕೆ ನಮ್ಮ ತಂದೆ ಟೈಗರ್ ಪ್ರಭಾಕರ್ ಕಾರಣ. ಅವರು ಬಿಟ್ಟು ಹೋದ ಅಧ್ಯಾಯ ನಾನು. ಅವರು 52ನೇ ವರ್ಷಕ್ಕೆ ತೀರಿ ಹೋದರು. ಅವರ ಕನಸುಗಳು ಇನ್ನೂ ಬಹಳ ಇತ್ತು. ಕೆಲವು ಸಿನಿಮಾಗಳನ್ನು ನಮ್ಮ ತಂದೆಯವರು ಮಾಡಬೇಕಾಗಿತ್ತು. ಅವರ ಕನಸು ನನಗೆ ಗೊತ್ತಿತ್ತು. ಅದು ಬಲರಾಮನ ದಿನಗಳು ಕೂಡ ಆಗಿರಬಹುದು. ನಾವು ಯಾವುದೇ ಪ್ರಶಸ್ತಿ ತೆಗೆದುಕೊಂಡರೂ ನಮ್ಮ ತಂದೆಗೆ ಅರ್ಪಿಸುತ್ತೇನೆ’ ಎಂದು ಅವರು ಹೇಳಿದರು. ‘ಬಲರಾಮನ ದಿನಗಳು’ ಸಿನಿಮಾ ಜೂನ್ 26ರಂದು ಬಿಡುಗಡೆ ಆಗಲಿದೆ. ಕೆ.ಎಂ. ಚೈತನ್ಯ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More