ದರ್ಶನ್ ವಿಚಾರದಲ್ಲಿ ಲೀಲಾವತಿಗೆ ಕೊಟ್ಟ ಮಾತು ಉಳಿಸಿಕೊಂಡ ವಿನೋದ್ ರಾಜ್
ನಟ ದರ್ಶನ್ ಅವರು ‘ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಇಲ್ಲದೆ ಈ ಸಿನಿಮಾ ತೆರೆಗೆ ಬರಲಿದೆ. ಸಿನಿಮಾನ ಅವರ ಅಭಿಮಾನಿಗಳು ಪ್ರಚಾರ ಮಾಡುತ್ತಿದ್ದಾರೆ. ಈಗ ವಿನೋದ್ ರಾಜ್ ಕೂಡ ಈ ಸಿನಿಮಾಗೆ ಬೆಂಬಲ ನೀಡಿದ್ದಾರೆ. ಅವರು ಈ ಸಿನಿಮಾನ ಪ್ರಚಾರ ಮಾಡಿದ್ದಾರೆ.
ನಟ ದರ್ಶನ್ ಹಾಗೂ ವಿನೋದ್ ರಾಜ್ ಮಧ್ಯೆ ಆಪ್ತತತೆ ಇದೆ. ಅವರು ಈಗ ದರ್ಶನ್ ಸಿನಿಮಾ ಬೆಂಬಲ ಮಾಡಿದ್ದಾರೆ. ‘ಡೆವಿಲ್’ ಸಿನಿಮಾದ ಪೋಸ್ಟರ್ ಹಿಡಿದು, ಡೆವಿಲ್ ರೀತಿ ಗಹಗಹಿಸಿ ನಕ್ಕಿದ್ದಾರೆ. ಆ ಬಳಿಕ ಡೆೆವಿಲ್ ಸಿನಿಮಾದ ಡೈಲಾಗ್ ಹೇಳಿದ್ದಾರೆ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ವಿನೋದ್ ರಾಜ್ ಅವರಿಗೆ ಅನಾರೋಗ್ಯ ಉಂಟಾದಾಗ ದರ್ಶನ್ ಸಹಾಯ ಮಾಡಿದ್ದರಂತೆ. ಈಗ ಅವರು ದರ್ಶನ್ ಸಿನಿಮಾ ಪ್ರಚಾರ ಮಾಡಿ ಋಣ ತೀರಿಸಿದ್ದಾರೆ. ಇನ್ನು, ದರ್ಶನ್ ಅವರನ್ನು ಯಾವಾಗಲೂ ಕೈ ಬಿಡದಂತೆ ವಿನೋದ್ ರಾಜ್ಗೆ ತಾಯಿ ಲೀಲಾವತಿ ಹೇಳಿದ್ದರಂತೆ. ಆ ಮಾತನ್ನು ಈಗ ಅವರು ನೆನಪಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Nov 25, 2025 11:50 AM