ಹಿಂದೂ-ಮುಸಲ್ಮಾನರ ಸಾಮರಸ್ಯಕ್ಕೆ ಪೆಟ್ಟು ಬಿದ್ದಿದೆ, ಮುಂದೇನು ಎಂಬುದು ಕಾಡತೊಡಗಿದೆ :ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ

| Updated By: ಸಾಧು ಶ್ರೀನಾಥ್​

Updated on: Apr 18, 2022 | 3:34 PM

Violence in Hubballi: ಹಳೆಯ ಹುಬ್ಬಳ್ಳಿಯಲ್ಲಿ ಹಳೆಯ ಸಮಸ್ಯೆಯೊಂದು ನವೀನ ಮಾದರಿಯಲ್ಲಿ ತಾಂಡವವಾಡಿದೆ. ಇದ್ದಕ್ಕಿದ್ದಂತೆ ಹಿಂದೂ ಮತ್ತು ಮುಸಲ್ಮಾನರ ಮಧ್ಯೆ ಸಾಮರಸ್ಯಕ್ಕೆ ಪೆಟ್ಟು ಕೊಟ್ಟಿದೆ. ಪೊಲೀಸರು ಸಕಾಲದಲ್ಲಿ ಎಚ್ಚೆತ್ತುಕೊಂಡು ಭಾರೀ ಅನಾಹುತ ತಪ್ಪಿಸಿದ್ದಾರೆ. ಈಗ ಮುಂದೇನು ಎಂಬುದು ಭೂತಾಕಾರವಾಗಿ ಕಾಡತೊಡಗಿದೆ. ಹುಬ್ಬಳ್ಳಿ ಗಲಭೆ -ಆತ್ಮವಿಮರ್ಶೆ ಬೇಕಾ? TV9 Kannada Digital Live ನಲ್ಲಿ ಚರ್ಚೆ

ಹಳೆಯ ಹುಬ್ಬಳ್ಳಿಯಲ್ಲಿ (Hubballi) ಹಳೆಯ ಸಮಸ್ಯೆಯೊಂದು ನವೀನ ಮಾದರಿಯಲ್ಲಿ ತಾಂಡವವಾಡಿದೆ. ಇದ್ದಕ್ಕಿದ್ದಂತೆ ಹಿಂದೂ (Hindu) ಮತ್ತು ಮುಸಲ್ಮಾನರ (Muslim Community) ಮಧ್ಯೆ ಸಾಮರಸ್ಯಕ್ಕೆ ಪೆಟ್ಟು ಕೊಟ್ಟಿದೆ (Violence in Hubballi). ಪೊಲೀಸರು ಸಕಾಲದಲ್ಲಿ ಎಚ್ಚೆತ್ತುಕೊಂಡು ಭಾರೀ ಅನಾಹುತ ತಪ್ಪಿಸಿದ್ದಾರೆ. ಈಗ ಮುಂದೇನು ಎಂಬುದು ಭೂತಾಕಾರವಾಗಿ ಕಾಡತೊಡಗಿದೆ. ಏಪ್ರಿಲ್ 17ರ ಭಾನುವಾರ ರಾತ್ರಿ ಹುಬ್ಬಳ್ಳಿ ನಗರದಲ್ಲಿ ದೊಡ್ಡ ಗಲಭೆಯೇ ನಡೆದು ಹೋಗಿದ್ದು, ಇಡೀ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದೆ. ಧರ್ಮ ಯುದ್ಧದ ಮಧ್ಯೆ ಹುಬ್ಬಳ್ಳಿ ಗಲಾಟೆಯಾಗಿರೋದು ರಾಜ್ಯವನ್ನ ಮತ್ತಷ್ಟು ಅಪಾಯಕಾರಿ ಪರಿಸ್ಥಿತಿಯತ್ತ ತಳ್ಳಿದೆ. ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 100ಕ್ಕೂ ಹೆಚ್ಚು ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. 88 ಆರೋಪಿಗಳನ್ನು ಬಂಧಿಸಿದ್ದಾರೆ. ಗಲಾಟೆ ಪ್ರಕರಣ ಸಂಬಂಧ ಈವರೆಗೆ 10 ಪ್ರಕರಣ ದಾಖಲಾಗಿವೆ.

ಹುಬ್ಬಳ್ಳಿಯಲ್ಲಿ ಮೊನ್ನೆ ನಡೆದ ಕೋಮು ಗಲಭೆಯ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯ ಯಾವ ರೀತಿಯಲ್ಲಿ ಅತ್ಮ ವಿಮರ್ಶೆ ಮಾಡಿಕೊಳ್ಳಬೇಕು? ಹಿಂದೂ ಸಮುದಾಯದ ನಾಯಕರು ಹೇಗೆ ಸಾಮರಸ್ಯಕ್ಕೆ ಸಹಾಯ ಮಾಡಬೇಕು? ಈ ಕುರಿತು ಆ್ಯಂಕರ್​ ಚಂದ್ರಮೋಹನ್ ಇಂದು ಟಿವಿ9 ಡಿಜಿಟಲ್ ಲೈವ್ ಚರ್ಚೆಯನ್ನು 3:30 ಕ್ಕೆ ನಡೆಸಿಕೊಡಲಿದ್ದಾರೆ, ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. ಹುಬ್ಬಳ್ಳಿ ಗಲಭೆ -ಆತ್ಮವಿಮರ್ಶೆ ಬೇಕಾ? (TV9 Kannada Digital Live)

ಇದೂ ವೀಕ್ಷಿಸಿ:
ಕೋಮು ಸಾಮರಸ್ಯ ಕದಡಲು ಪೊಲೀಸ್​ ವೈಫಲ್ಯ ಕಾರಣವಾ? ಪೊಲೀಸರು ತಡವಾಗಿ ಎಚ್ಚೆತ್ತರಾ? ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ

ಇದೂ ವೀಕ್ಷಿಸಿ:
ಸಿಎಂ ಮನೆಗೆ ಮುತ್ತಿಗೆ ವಿಚಾರ; ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ ಸೇರಿ 36 ಜನರ ವಿರುದ್ಧ ಎಫ್ಐಆರ್ ದಾಖಲು