ಗೋಸುಂಬೆ ಮೇಲೆ ದಾಳಿ ಮಾಡಿ ನುಂಗಿದ ಹಸಿರು ಹಾವು; ವಿಡಿಯೋ ವೈರಲ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: May 11, 2024 | 5:14 PM

ಯಾದಗಿರಿ ನಗರದ ಲುಂಬಿನಿ ಉದ್ಯಾನವನದಲ್ಲಿ ಇಂದು(ಮೇ.11) ಅಪರೂಪದ ಘಟನೆಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂದು ಗೋಸುಂಬೆ ಮೇಲೆ ಹಸಿರು ಬಣ್ಣದ ಹಾವೊಂದು(green snake) ದಾಳಿ ನಡೆಸಿತ್ತು. ಹೆಚ್ಚಾಗಿ ಮರದ ಮೇಲೆ ಕಂಡು ಈ ಹಾವು, ಗೋಸುಂಬೆ ಮೇಲೆ ದಾಳಿ ಮಾಡಿ ನುಂಗಿದೆ.

ಯಾದಗಿರಿ, ಮೇ.11: ಯಾದಗಿರಿ ನಗರದ ಲುಂಬಿನಿ ಉದ್ಯಾನವನದಲ್ಲಿ ಇಂದು(ಮೇ.11) ಅಪರೂಪದ ಘಟನೆಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೌದು, ಗೋಸುಂಬೆ(chameleon), ಇದನ್ನು ಓತಿಕೇತ ಎಂತಲೂ ಕೆಲವು ಕಡೆಗಳಲ್ಲಿ ಕರೆಯುತ್ತಾರೆ. ಇಂದು ಇದರ ಮೇಲೆ ಹಸಿರು ಬಣ್ಣದ ಹಾವೊಂದು(green snake) ದಾಳಿ ನಡೆಸಿತ್ತು. ಹೆಚ್ಚಾಗಿ ಮರದ ಮೇಲೆ ಕಂಡು ಈ ಹಾವು, ಗೋಸುಂಬೆ ಮೇಲೆ ದಾಳಿ ಮಾಡಿ ನುಂಗಿದೆ. ಹಾವು ಗೋಸುಂಬೆ ನುಂಗುವ ವಿಡಿಯೋ ಟಿವಿ9 ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹಸಿರು ಹಾವು

ಇದು ಉತ್ತರ ಅಮೆರಿಕಾದ ವಿಷರಹಿತ ಹಾವಿನ ಒಂದು ಜಾತಿಯಾಗಿದೆ. ಈ ಜಾತಿಯನ್ನು ಹುಲ್ಲು ಹಾವು ಎಂದು ಕೂಡ ಕರೆಯುತ್ತಾರೆ . ಇದು ತೆಳ್ಳಗಿನ, “ಸಣ್ಣ ಮಧ್ಯಮ” ಹಾವಾಗಿದ್ದು, 36 ರಿಂದ 51 ಸೇ.ಮೀ ಉದ್ದ ಇರುತ್ತದೆ. ಕೀಟನಾಶಕಗಳ ಬಳಕೆಯಿಂದ ಈ ಹಸಿರು ಹಾವಿನ ಸಂತತಿಯೂ ಕ್ಷೀಣಿಸುತ್ತಿದೆ. ಜೊತೆಗೆ ರಸ್ತೆ ನಿರ್ಮಾಣ, ಮರ ಕಡಿಯುವುದು, ಜಾನುವಾರು ಮೇಯಿಸುವಿಕೆ, ಹೊಳೆಗಳು ಬರಿದಾಗುವುದರಿಂದ ಆವಾಸಸ್ಥಾನ ನಾಶವಾಗುತ್ತದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published on: May 11, 2024 05:09 PM