Video: ಅಪ್ಪನಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ ಪುಟ್ಟ ಬಾಲಕಿ; ಹೃದಯಸ್ಪರ್ಶಿ ವೀಡಿಯೊ ವೈರಲ್

Updated on: May 29, 2026 | 3:20 PM

ಯೂಟ್ಯೂಬ್‌ ಆದಾಯದಿಂದ ತಂದೆಗೆ ಚಿನ್ನದ ಉಂಗುರ ಉಡುಗೊರೆ ನೀಡಿದ ಪುಟ್ಟ ಬಾಲಕಿಯ ಹೃದಯಸ್ಪರ್ಶಿ ವಿಡಿಯೊ ವೈರಲ್‌ ಆಗಿದೆ. ಮಗಳು ಉಂಗುರ ತೊಡಿಸುತ್ತಿದ್ದಂತೆ ತಂದೆ ಭಾವುಕರಾಗಿ ಆಕೆಯ ಕಾಲಿಗೆ ನಮಸ್ಕರಿಸಿದ ಕ್ಷಣ ನೋಡುಗರ ಕಣ್ಣಲ್ಲಿ ನೀರು ತರಿಸಿದೆ. ಮಗಳು-ತಂದೆಯ ಪ್ರೀತಿ, ಕೃತಜ್ಞತೆ ಮತ್ತು ಬಾಂಧವ್ಯದ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ.

ತನ್ನ ಯೂಟ್ಯೂಬ್‌ ಆದಾಯದ ಮೊದಲ ಸಂಪಾದನೆಯಿಂದ ತಂದೆಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ ಪುಟ್ಟ ಬಾಲಕಿಯ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ನೆಟ್ಟಿಗರ ಮನ ಗೆದ್ದಿದೆ. ವಿಡಿಯೊದಲ್ಲಿ ಮುದ್ದಾದ ಬಾಲಕಿ ತಂದೆಯ ಮುಂದೆ ಮಂಡಿಯೂರಿ ಪ್ರೀತಿಯಿಂದ ಉಂಗುರ ತೊಡಿಸುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆಯುತ್ತದೆ. ಮಗಳ ಮುಖದಲ್ಲಿನ ಹೆಮ್ಮೆ ಮತ್ತು ಸಂತೋಷ ಸ್ಪಷ್ಟವಾಗಿ ಕಾಣುತ್ತಿದ್ದರೆ, ಆಕೆಯ ಈ ಅಮೂಲ್ಯ ಉಡುಗೊರೆಯನ್ನು ಕಂಡ ತಂದೆ ಭಾವುಕರಾಗಿ ಮಗಳ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವ ಕ್ಷಣ ನೋಡುಗರ ಕಣ್ಣೀರನ್ನು ತರಿಸುತ್ತದೆ. ಬಳಿಕ ತಂದೆಯ ಆಶೀರ್ವಾದ ಪಡೆದುಕೊಂಡ ಬಾಲಕಿ ಸಂತೋಷದಿಂದ ಸಣ್ಣದಾಗಿ ನೃತ್ಯ ಮಾಡುವ ದೃಶ್ಯ ವಿಡಿಯೊಗೆ ಇನ್ನಷ್ಟು ಮಧುರತೆಯನ್ನು ತುಂಬಿದೆ. ಮಗಳು-ತಂದೆಯ ನಡುವಿನ ಅಪಾರ ಪ್ರೀತಿ, ಕೃತಜ್ಞತೆ ಮತ್ತು ಬಾಂಧವ್ಯದ ಈ ಅಪೂರ್ವ ಕ್ಷಣವನ್ನು ಕಂಡ ನೆಟ್ಟಿಗರು ಭಾವುಕರಾಗಿ ಮೆಚ್ಚುಗೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: May 29, 2026 03:14 PM
Loading...
Unable to load recommendations.
Follow Us
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More