ಮೊಬೈಲ್ ಕೊಡಲ್ಲ, ನಾನೇ ಸೆಲ್ಫೀ ತೆಗೀತೀನಿ! ಮಹಿಳೆಯ ಫೋನ್ ಕಸಿದ ಮಂಗನ ಕೆಲಸಕ್ಕೆ ನೆಟ್ಟಿಗರು ಫಿದಾ; ವಿಡಿಯೋ ವೈರಲ್!

Updated on: Mar 25, 2026 | 3:15 PM

ಕೋತಿಗಳ ಕೈಗೆ ಮೊಬೈಲ್ ಸಿಕ್ಕರೆ ಏನಾಗಬಹುದು? ಗುಜರಾತ್‌ನ ಪಠಾಣ್ ಜಿಲ್ಲೆಯಲ್ಲಿ ಇಂತಹದ್ದೇ ಒಂದು ಅಚ್ಚರಿಯ ಘಟನೆ ನಡೆದಿದೆ. ಮಹಿಳೆಯ ಕೈಯಿಂದ ಫೋನ್ ಕಸಿದುಕೊಂಡ ಮುಸುವವೊಂದು (ಮಂಗ), ಅದನ್ನು ಮನುಷ್ಯರಂತೆ ಬಳಸಿ ಸೆಲ್ಫೀ ತೆಗೆಯಲು ಯತ್ನಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಈ ಟೆಕ್ ಸ್ಯಾವಿ ಮಂಗನ ಕೌತುಕದ ವರದಿ ಹಾಗೂ ವಿಡಿಯೋ ಇಲ್ಲಿದೆ.

ಗುಜರಾತ್‌ನ ಪಠಾಣ್ ಜಿಲ್ಲೆಯಲ್ಲಿ ಒಂದು ಕುತೂಹಲಕಾರಿ ಘಟನೆ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮೂಲಗಳ ಮಾಹಿತಿಯ ಪ್ರಕಾರ, ಪಠಾಣ್ ಬಳಿಯ ಅಘರ್ ಗ್ರಾಮದಲ್ಲಿ ಮಹಿಳೆಯೊಬ್ಬರು ಮೊಬೈಲ್ ಫೋನ್‌ನೊಂದಿಗೆ ನಿಂತಿದ್ದಾಗ ಇದ್ದಕ್ಕಿದ್ದಂತೆ ಮುಸುವಗಳ (ಕೋತಿಗಳ ಒಂದು ಪ್ರಭೇದ) ಗುಂಪು ಅಲ್ಲಿಗೆ ಬಂದಿದೆ. ಈ ಸಮಯದಲ್ಲಿ, ಒಂದು ಕೋತಿ ಮಹಿಳೆಯ ಕೈಯಿಂದ ಮೊಬೈಲ್ ಫೋನ್ ಕಸಿದುಕೊಂಡಿದೆ. ನಂತರ ನಡೆದ ಘಟನೆ ಅಲ್ಲಿದ್ದ ಜನರನ್ನು ಆಶ್ಚರ್ಯಚಕಿತರನ್ನಾಗಿಸಿದೆ.

ಕೋತಿ ಮೊಬೈಲ್ ಅನ್ನು ಒಂದು ಬದಿಯಲ್ಲಿ ಹಿಡಿದುಕೊಂಡು ಸ್ಕ್ರೀನ್​ನೊಂದಿಗೆ ಆಟವಾಡಲು ಪ್ರಾರಂಭಿಸಿದೆ. ಅದು ಮೊಬೈಲ್ ಬಳಕೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಒಂದು ಹಂತದಲ್ಲಿ, ಕೋತಿ ಸೆಲ್ಫೀ ತೆಗೆಯಲು ಯತ್ನಿಸಿದಂತೆ ಕಾಣಿಸಿದೆ.

ಗುಂಪಿನಲ್ಲಿದ್ದ ಇತರ ಮಂಗಗಳು ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸಿವೆ. ಆದರೆ ಈ ಮಂಗ ಮುಸುವ ಕೊಡಲು ನಿರಾಕರಿಸಿದೆ. ಈ ಎಲ್ಲ ದೃಶ್ಯಗಳನ್ನು ಸ್ಥಳದಲ್ಲಿದ್ದವರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Published on: Mar 25, 2026 03:14 PM
Follow Us
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More