KR Market: ಕೆಆರ್​ ಮಾರ್ಕೆಟ್ ಫ್ಲೈಓವರ್​ ಮೇಲಿಂದ ಹಣದ ಮಳೆ, ವಿಡಿಯೋ ವೈರಲ್

Edited By:

Updated on: Jan 24, 2023 | 12:37 PM

ಆ್ಯಕ್ಟಿವ್ ಹೋಂಡಾದಲ್ಲಿ ಬಂದ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆ ಬಂದಿದೆ ಎಂದು ಫ್ಲೈಓವರ್​ ಮೇಲಿಂದ ಹತ್ತು ರೂಪಾಯಿ ನೋಟು ಚೆಲ್ಲಿ ಹೋಗಿದ್ದಾರೆ.

ಬೆಂಗಳೂರು: ನಗರದ ಕೆ.ಆರ್​.ಮಾರ್ಕೆಟ್​​ನಲ್ಲಿ 10 ರೂ. ಮುಖಬೆಲೆಯ ಹಣದ ನೋಟುಗಳ ಸುರಿಮಳೆಯಾಗಿದೆ. ವ್ಯಕ್ತಿಯೋರ್ವ ಕೆ.ಆರ್​.ಮಾರ್ಕೆಟ್ ಫ್ಲೈಓವರ್​ ಮೇಲಿಂದ ಹಣ ಎಸೆದಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದು ಹಣ ಎಸೆದು ಹೋಗಿದ್ದಾರೆ.

ಆ್ಯಕ್ಟಿವ್ ಹೋಂಡಾದಲ್ಲಿ ಬಂದ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆ ಬಂದಿದೆ ಎಂದು ಫ್ಲೈಓವರ್​ ಮೇಲಿಂದ ಹತ್ತು ರೂಪಾಯಿ ನೋಟು ಚೆಲ್ಲಿ ಹೋಗಿದ್ದಾರೆ. ಮೇಲಿಂದ ಹಣ ಬೀಳುತ್ತಿದ್ದಂತೆ ಕೆಲವರು ಅದನ್ನು ಎತ್ತಿಕೊಳ್ಳಲು ಮುಗಿಬಿದಿದ್ದಾರೆ. ಸದ್ಯ ಫ್ಲೈಓವರ್​ ಮೇಲಿಂದ ಹಣದ ಮಳೆಯಾಗುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ತನಿಖೆಗಿಳಿದ ಪೊಲೀಸ್

ನೋಟು ಎಸೆದ ವ್ಯಕ್ತಿ ಯಾರೆನ್ನುವುದರ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಯಾವ ಉದ್ದೇಶಕ್ಕೆ ಹಣ ಎಸೆದ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಹಣ ಚೆಲ್ಲಿದ ವ್ಯಕ್ತಿ ಬೆಂಗಳೂರಲ್ಲಿ ಇವೆಂಟ್​ ಮ್ಯಾನೇಜ್​ಮೆಂಟ್ ನಡೆಸುತ್ತಿದ್ದ ಅರುಣ್​ ಎಂಬುವುದು ಪತ್ತೆಯಾಗಿದೆ. ಅರುಣ್​, ಇವೆಂಟ್ ಮ್ಯಾನೇಜ್​ಮೆಂಟ್​ ಜೊತೆ ಌಂಕರಿಂಗ್ ಕೂಡ ಮಾಡುತ್ತಿದ್ದ. ನಾಗರಬಾವಿಯಲ್ಲಿದ್ದು ಯೂಟ್ಯೂಬ್​ ಚಾನಲ್ ನಡೆಸುತ್ತಿದ್ದಾನೆ.

Published on: Jan 24, 2023 12:23 PM