IND vs AFG 3rd T20I: ಬುಮ್ರಾ ಬೌಲಿಂಗ್ ಶೈಲಿಯಲ್ಲಿ ಸಿಕ್ಸರ್ ತಡೆದ ವಿರಾಟ್ ಕೊಹ್ಲಿ: ವಿಡಿಯೋ ನೋಡಿ

|

Updated on: Jan 18, 2024 | 8:11 AM

Virat Kohli Sixer Save Video: ಅಫ್ಘಾನಿಸ್ತಾನ ವಿರುದ್ಧದ ತೃತೀಯ ಟಿ20 ಪಂದ್ಯ ಟೈ ಆಗುವಲ್ಲಿ ವಿರಾಟ್ ಕೊಹ್ಲಿ ಪಾತ್ರ ಮುಖ್ಯವಾಗಿತ್ತು. ಕೊಹ್ಲಿ ಒಂದು ಸಿಕ್ಸರ್ ತಡೆದ ರೀತಿ ಅದ್ಭುತವಾಗಿತ್ತು. ಅಲ್ಲದೆ ಕೊಹ್ಲಿ ಈ ಸಿಕ್ಸರ್ ಸೇವ್ ಮಾಡಿದ ಶೈಲಿ ಥೇಟ್ ಜಸ್​ಪ್ರಿತ್ ಬುಮ್ರಾ ಬೌಲಿಂಗ್ ಮಾಡುವ ರೀತಿಯಲ್ಲಿತ್ತು. ಇದರ ವಿಡಿಯೋ ವೈರಲ್ ಆಗುತ್ತಿದೆ.

ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್​ಸ್ವೀಪ್ ಮಾಡುವ ಮೂಲಕ ಟೀಮ್ ಇಂಡಿಯಾ (India vs Afghanistan) ಮೇಲುಗೈ ಸಾಧಿಸಿದೆ. ಆದರೆ, ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಬುಧವಾರ ನಡೆದ ಅಂತಿಮ ತೃತೀಯ ಟಿ20 ಪಂದ್ಯ ರಣರೋಚಕ ಸೂಪರ್ ಓವರ್​ಗೆ ಸಾಕ್ಷಿಯಾಯಿತು. ಭಾರತೀಯ ಬೌಲರ್​ಗಳ ದಾಳಿಯನ್ನು ಅಫ್ಘಾನ್ ಸಮರ್ಥವಾಗಿ ಎದುರಿಸಿದ ಪರಿಣಾಮ ಪಂದ್ಯ ಟೈ ಆಯಿತು. ಬಳಿಕ ಎರಡೆರಡು ಸೂಪರ್ ಓವರ್ ನಡೆದು ಇದರಲ್ಲಿ ಭಾರತ ಜಯ ಸಾಧಿಸಿತು. ಪಂದ್ಯವನ್ನು ಟೈ ಮಾಡುವಲ್ಲಿ ವಿರಾಟ್ ಕೊಹ್ಲಿ ಪಾತ್ರ ಮುಖ್ಯವಾಗಿತ್ತು. ಕೊಹ್ಲಿ ಒಂದು ಸಿಕ್ಸರ್ ತಡೆದ ರೀತಿ ಅದ್ಭುತವಾಗಿತ್ತು. 17ನೇ ಓವರ್‌ನ ಅಂತಿಮ ಎಸೆತದಲ್ಲಿ ಈ ಘಟನೆ ನಡೆಯಿತು. ಕರೀಮ್ ಜನತ್ ಚೆಂಡನ್ನು ಸಿಕ್ಸ್​ಗೆಂದು ಅಟ್ಟಿದರು. ಆದರೆ, ಚೆಂಡು ಲಾಂಗ್-ಆನ್‌ನಲ್ಲಿ ಸಾಗುತ್ತಿದೆ ಎಂಬದನ್ನು ಗಮನಿಸಿದ ಕೊಹ್ಲಿ ಎತ್ತರಕ್ಕೆ ಹಾರಿ ಚೆಂಡನ್ನು ಬೌಂಡರಿ ಲೈನ್ ಒಳಗೆ ತಳ್ಳಿದರು. ಈ ಮೂಲಕ 5 ರನ್‌ಗಳನ್ನು ಉಳಿಸಿದರು. ಅಲ್ಲದೆ ಕೊಹ್ಲಿ ಸಿಕ್ಸರ್ ಸೇವ್ ಮಾಡಿದ ಶೈಲಿ ಥೇಟ್ ಜಸ್​ಪ್ರಿತ್ ಬುಮ್ರಾ ಬೌಲಿಂಗ್ ಮಾಡುವ ರೀತಿಯಲ್ಲಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on