ಟೀಂ ಇಂಡಿಯಾದಲ್ಲಿ ಒಡಕು? ಸಂಭ್ರಮಾಚರಣೆಯಿಂದಲೂ ಕೊಹ್ಲಿ ದೂರ ದೂರ! ವಿಡಿಯೋ

Updated on: Dec 01, 2025 | 7:17 PM

Virat Kohli: ಭಾರತ ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 17 ರನ್‌ಗಳಿಂದ ಗೆದ್ದಿತು, ವಿರಾಟ್ ಕೊಹ್ಲಿ 135 ರನ್ ಗಳಿಸಿ ಪಂದ್ಯಶ್ರೇಷ್ಠರಾದರು. ಆದರೆ, ಹೋಟೆಲ್‌ನಲ್ಲಿ ನಡೆದ ಗೆಲುವಿನ ಸಂಭ್ರಮದಲ್ಲಿ, ಸಿಬ್ಬಂದಿ ಪದೇ ಪದೇ ಕರೆದರೂ ಕೊಹ್ಲಿ ಕೇಕ್ ಕಟಿಂಗ್‌ನಲ್ಲಿ ಭಾಗವಹಿಸದೆ ತಮ್ಮ ಕೊಠಡಿಗೆ ತೆರಳಿದರು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 17 ರನ್‌ಗಳಿಂದ ಜಯಗಳಿಸಿತು. ತಂಡದ ಪರ ಗೆಲುವಿನ ಇನ್ನಿಂಗ್ಸ್ ಆಡಿದ ಮಾಜಿ ನಾಯಕ ವಿರಾಟ್ ಕೊಹ್ಲಿ 135 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಭಾರತದ ಗೆಲುವಿನ ನಂತರ, ಹೋಟೆಲ್ ಕೋಣೆಯಲ್ಲಿ ಸಂಭ್ರಮಾಚರಣೆ ನಡೆಯಿತು. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವೀಡಿಯೊದಲ್ಲಿ, ಹೋಟೆಲ್ ಸಿಬ್ಬಂದಿ ಟೀಂ ಇಂಡಿಯಾದ ವಿಜಯವನ್ನು ಆಚರಿಸಲು ಕೇಕ್ ಕತ್ತರಿಸುವ ಸಮಾರಂಭವನ್ನು ಆಯೋಜಿಸಿದ್ದರು.

ಅದರಂತೆ ನಾಯಕ ಕೆಎಲ್ ರಾಹುಲ್ ಕೇಕ್ ಕೂಡ ಕತ್ತರಿಸಿದರು. ಆದಾಗ್ಯೂ, ಹೋಟೆಲ್ ಸಿಬ್ಬಂದಿ ಪದೇ ಪದೇ ಕರೆದರೂ, ವಿರಾಟ್ ಕೊಹ್ಲಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಲಿಲ್ಲ. ಕೆಎಲ್ ರಾಹುಲ್ ಕೇಕ್ ಕತ್ತರಿಸುತ್ತಿರುವಾಗ, ಕೋಚ್ ಗೌತಮ್ ಗಂಭೀರ್ ಮತ್ತು ರೋಹಿತ್ ಶರ್ಮಾ ಅವರ ಹಿಂದೆ ನಿಂತಿದ್ದರು. ಇಬ್ಬರು ಮಾತುಕತೆಯಲ್ಲಿ ತೊಡಗಿದ್ದರು. ಇತ್ತ ಕೊಹ್ಲಿ ಕೂಡ ಅಲ್ಲಿಯೇ ಹಾದುಹೋಗುತ್ತಿದ್ದರು. ಹೀಗಾಗಿ ಅಲ್ಲಿದ್ದವರೆಲ್ಲ ಕೊಹ್ಲಿಯನ್ನು ಸಂಭ್ರಮಾಚರಣೆ ಭಾಗಿಯಾಗುವಂತೆ ಕೇಳಿಕೊಂಡರು. ಆದರೆ ಕೊಹ್ಲಿ ಅವರನ್ನು ನಿರ್ಲಕ್ಷಿಸಿ ಹೋಟೆಲ್​ ರೂಮ್​ಗೆ ತೆರಳಿದರು. ಇದೀಗ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Published on: Dec 01, 2025 07:16 PM