ಸರಣಿ ಮುಗಿಯುತ್ತಿದ್ದಂತೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
Virat Kohli: ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಈ ಸರಣಿಯ ಮೊದಲ ಮ್ಯಾಚ್ನಲ್ಲಿ 135 ರನ್ ಬಾರಿಸಿದ್ದ ಕಿಂಗ್ ಕೊಹ್ಲಿ ದ್ವಿತೀಯ ಪಂದ್ಯದಲ್ಲಿ 102 ರನ್ ಕಲೆಹಾಕಿದ್ದರು. ಇನ್ನು ಮೂರನೇ ಪಂದ್ಯದಲ್ಲಿ ಅಜೇಯ 65 ರನ್ ಸಿಡಿಸಿ ಒಟ್ಟು 302 ರನ್ ಕಲೆಹಾಕಿದ್ದರು. ಈ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ವಿಶಾಖಪಟ್ಟಣದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯ ಗೆದ್ದ ಒಂದು ದಿನದ ನಂತರ, ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸಿಂಹಾಚಲಂನಲ್ಲಿರುವ ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಅವರೊಂದಿಗೆ ಭಾರತ ತಂಡದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್, ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಮತ್ತು ಆಂಧ್ರ ಕ್ರಿಕೆಟ್ ಅಸೋಸಿಯೇಷನ್ (ACA) ಸಿಬ್ಬಂದಿಗಳು ಹಾಜರಿದ್ದರು.
ಸಿಂಹಾಚಲಂ ದೇವಸ್ತಾನದ ಉಪ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಧಾ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಕೆ. ತಿರುಮಲೇಶ್ವರ ರಾವ್ ಅವರು ಭಾರತದ ಮಾಜಿ ನಾಯಕನನ್ನು ಇತರ ಸದಸ್ಯರೊಂದಿಗೆ ಸ್ವಾಗತಿಸಿದರು.
ಇದೇ ವೇಳೆ ವಿರಾಟ್ ಕೊಹ್ಲಿ ‘ಕಪ್ಪ ಸ್ತಂಭ’ (ಪವಿತ್ರ ಸ್ತಂಭ) ವನ್ನು ಅಪ್ಪಿಕೊಂಡು ನಂತರ ಪ್ರಧಾನ ದೇವರ ದರ್ಶನ ಪಡೆದು, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದರ್ಶನದ ನಂತರ, ವೇದ ವಿದ್ವಾಂಸರು ಸಂದರ್ಶಕರಿಗೆ ‘ವೇದ ಆಶೀರ್ವಚನೆ’, ‘ನಾದಸ್ವರಂ’ ಮತ್ತು ‘ವೇದ ಮಂತ್ರಗಳೊಂದಿಗೆ ಆಶೀರ್ವದಿಸಿದರು.
ಸಿಂಹಾಚಲಂ ದೇವಸ್ಥಾನದ ಪರವಾಗಿ, ವಿರಾಟ್ ಕೊಹ್ಲಿಗೆ ಅವರಿಗೆ ‘ಸ್ವಾಮಿ ವಾರಿ ಶೇಷ ವಸ್ತ್ರಂ’ ಜೊತೆಗೆ ದೇವರ ಭಾವಚಿತ್ರ ಮತ್ತು ಪ್ರಸಾದವನ್ನು ನೀಡಿ ಗೌರವಿಸಲಾಯಿತು. ಇದೀಗ ವಿರಾಟ್ ಕೊಹ್ಲಿ ‘ಕಪ್ಪ ಸ್ತಂಭ’ ಅನ್ನು ಅಪ್ಪಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಈ ಸರಣಿಯ ಮೊದಲ ಮ್ಯಾಚ್ನಲ್ಲಿ 135 ರನ್ ಬಾರಿಸಿದ್ದ ಕಿಂಗ್ ಕೊಹ್ಲಿ ದ್ವಿತೀಯ ಪಂದ್ಯದಲ್ಲಿ 102 ರನ್ ಕಲೆಹಾಕಿದ್ದರು. ಇನ್ನು ಮೂರನೇ ಪಂದ್ಯದಲ್ಲಿ ಅಜೇಯ 65 ರನ್ ಸಿಡಿಸಿ ಒಟ್ಟು 302 ರನ್ ಕಲೆಹಾಕಿದ್ದರು. ಈ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

