ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?

Edited By:

Updated on: Aug 12, 2025 | 8:34 PM

‘ಸಾಹಸ ಸಿಂಹ’ ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿದ್ದನ್ನು ಅವರ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ವಿಷ್ಣುವರ್ಧನ್ ಅಭಿಮಾನಿ ಸರವಣ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೊದಲು ಅಂಬರೀಷ್ ಅವರ ಮನೆಯಲ್ಲಿ ನಟ ಬಾಲಣ್ಣ ಮಗಳು ಗೀತಾ ಬಾಲಿ ಜೊತೆ ಸಭೆ ಮಾಡಲಾಗಿತ್ತು. ಆಗ ಏನೆಲ್ಲ ನಡೆದಿತ್ತು ಎಂಬುದನ್ನು ಸರವಣ ವಿವರಿಸಿದ್ದಾರೆ.

ನಟ ವಿಷ್ಣುವರ್ಧನ್ ಅವರ ಸಮಾಧಿ (Vishnuvardhan Samadhi) ನೆಲಸಮ ಮಾಡಿದ್ದನ್ನು ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ವಿಷ್ಣು ಅಭಿಮಾನಿ ಸರವಣ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೊದಲು ಅಂಬರೀಷ್ ಅವರ ಮನೆಯಲ್ಲಿ ನಟ ಬಾಲಣ್ಣ ಮಗಳು ಗೀತಾ ಬಾಲಿ ಜೊತೆ ಸಭೆ ಮಾಡಲಾಗಿತ್ತು. ಕೇಸ್ ಹಿಂಪಡೆಯುವಂತೆ ಮನವೊಲಿಸಲಾಗಿತ್ತು. ಆದರೆ ಆ ಮಾತಿನಂತೆ ಗೀತಾ ಬಾಲಿ ನಡೆದುಕೊಳ್ಳಲಿಲ್ಲ ಎಂದು ಸರವಣ ಹೇಳಿದ್ದಾರೆ. ಈಗ ಅಭಿಮಾನಿಗಳ (Vishnuvardhan Fans) ಜೊತೆ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಅವರು ಸಭೆ ಕರೆದಿದ್ದಾರೆ. ಮುಂದಿನ ನಡೆ ಬಗ್ಗೆ ಅಭಿಮಾನಿ ಸರವಣ ಅವರು ಟಿವಿ9 ಜೊತೆ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More