ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕೇವಲ ಸ್ಪೀಕರ್ ಅಲ್ಲ ವಿರೋಧ ಪಕ್ಷದ ನಾಯಕನಾಗುವ ಅರ್ಹತೆಯೂ ಇದೆ: ಯುಟಿ ಖಾದರ್

Arun Kumar Belly

|

Updated on:Feb 24, 2023 | 4:08 PM

ಆಡಳಿತ ಪಕ್ಷದ ಸದಸ್ಯರ ಒತ್ತಡದ ನಡುವೆಯೂ ಅವರು ವಿರೋಧ ಪಕ್ಷಗಳ ಸದಸ್ಯರಿಗೆ ಸದನದಲ್ಲಿ ಮಾತಾಡಲು ಸಮಾನ ಅವಕಾಶ ನೀಡಿದರು ಎಂದು ಖಾದರ್ ಹೇಳಿದರು.

ಬೆಂಗಳೂರು: ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾಗಿರುವ ಯುಟಿ ಖಾದರ್ (UT Khader) ಅವರು ಅಧಿವೇಶನದ ಕೊನೆಯ ದಿನವಾದ ಇಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರನ್ನು ಹಾಡಿ ಹೊಗಳಿದರು. ಆಡಳಿತ ಪಕ್ಷದ ಸದಸ್ಯರ ಒತ್ತಡದ ನಡುವೆಯೂ ಅವರು ವಿರೋಧ ಪಕ್ಷಗಳ ಸದಸ್ಯರಿಗೆ ಸದನದಲ್ಲಿ ಮಾತಾಡಲು ಸಮಾನ ಅವಕಾಶ ನೀಡಿದರು ಎಂದು ಖಾದರ್ ಹೇಳಿದರು. ಕಾಗೇರಿ ಅವರಿಗೆ ಕೇವಲ ಸ್ಪೀಕರ್ (Speaker) ಮಾತ್ರ ಅಲ್ಲ ವಿರೋಧ ಪಕ್ಷದ ನಾಯಕರಾಗುವ ಅರ್ಹತೆ ಕೂಡ ಇದೆ ಎಂದು ಖಾದರ್ ಹೇಳಿದಾಗ ಆಡಳಿತ ಪಕ್ಷದ ಸದಸ್ಯರೊಬ್ಬರು ವಿರೋಧ ಪಕ್ಷದ ನಾಯಕ ಅಲ್ಲ ಮುಖ್ಯಮಂತ್ರಿ ಅನ್ನಿ ಅಂತ ಹೇಳಿದಾಗ ಅವರು ಮುಗುಳ್ನಗುತ್ತಾ ಮುಂದೆ ನೀವು ಯಾವತ್ತಾದರೂ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ಕಾಗೇರಿ ಅವರು ಯೋಗ್ಯ ಮತ್ತು ಸೂಕ್ತ ವ್ಯಕ್ತಿಯಾಗಿರುತ್ತಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada