ಸದನದಲ್ಲಿ ಸದಸ್ಯರ ಗಲಾಟೆಯಿಂದ ತಾಳ್ಮೆ ಕಳೆದುಕೊಂಡ ಸಭಾಧ್ಯಕ್ಷರು ಹೆಡ್ ಫೋನನ್ನು ಟೇಬಲ್ ಮೇಲೆ ಬಿಸಾಡಿದರು!
ಸದಸ್ಯರ ಗಲಾಟೆ ಒಂದು ಹಂತದಲ್ಲಿ ಅವರಲ್ಲಿ ಯಾವಮಟ್ಟಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ ಅಂದರೆ, ಕೋಪ ಮತ್ತು ಅಸಹನೆಯಿಂದ ಹೆಡ್ ಪೋನನ್ನು ಟೇಬಲ್ ಮೇಲೆ ಕುಕ್ಕುತ್ತಾರೆ.
ಬೆಂಗಳೂರು: ಗುರುವಾರ ವಿಧಾನ ಮಂಡಲ ಕಾರ್ಯಕಲಾಪಗಳಲ್ಲಿ ಗಲಾಟೆ ಮತ್ತು ಗದ್ದಲಮಯ ವಾತಾವರಣ (pandemonium) ಸೃಷ್ಟಿಯಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕಿತ್ತಾಡಿದರೆ, ಜೆಡಿ(ಎಸ್) ಸದಸ್ಯರು ಸನ್ನಿವೇಶವನ್ನು ಎಂಜಾಯ್ ಮಾಡುತ್ತಾ ಕುಳಿತಿದ್ದರು. ಈ ವಿಡಿಯೋನಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ಬಿಜೆಪಿ ಸದಸ್ಯರು ಅದರಲ್ಲೂ ವಿಶೇಷವಾಗಿ ಪಕ್ಷದ ಚೀಫ್ ವಿಪ್ ಆಗಿರುವ ಸತೀಶ್ ರೆಡ್ಡಿ (Satish Reddy) ಅವರ ವಿರುದ್ಧ ರೇಗುತ್ತಿರುವುದನ್ನು ಕಾಣಬಹುದು. ಸದಸ್ಯರ ಗಲಾಟೆ ಒಂದು ಹಂತದಲ್ಲಿ ಅವರಲ್ಲಿ ಯಾವಮಟ್ಟಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ ಅಂದರೆ, ಕೋಪ ಮತ್ತು ಅಸಹನೆಯಿಂದ ಹೆಡ್ ಪೋನನ್ನು ಟೇಬಲ್ ಮೇಲೆ ಕುಕ್ಕುತ್ತಾರೆ.
Latest Videos