ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!

|

Updated on: Jul 06, 2024 | 7:10 PM

ಶರಾವತಿ ನದಿಯ ಕ್ಯಾಚ್ಮೆಂಟ್ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನದಿಯಲ್ಲಿ ನೀರು ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಆಫ್ ಕೋರ್ಸ್, ರಾಜ್ಯದೆಲ್ಲೆಡೆ ಮಳೆ ಚೆನ್ನಾಗಿ ಸುರಿಯುತ್ತದೆ. ಜೋಗದ ಜಲಪಾತಗಳಲ್ಲಿ ಧುಮ್ಮುಕ್ಕುತ್ತಿರುವ ನೀರು ಹಾಲ್ನೊರೆಯಂತೆ ಕಾಣುವುದರ ಜೊತೆಗೆ ಮತ್ತೊಂದು ಕಡೆ ಚಹಾದಂತೆ ಕಾಣುವ ನೀರು ಕೂಡ ಹರಿಯುತ್ತಿದೆ! ಪ್ರಾಯಶಃ ಕೆಂಪುಮಣ್ಣಿನೊಂದಿಗೆ ಶರಾವತಿ ನೀರು ಬೆರೆತಿರಬಹುದು.

ಶಿವಮೊಗ್ಗ: ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ, ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ….. ಜೋಗ ಜಲಪಾತವನ್ನು ನೋಡುವಾಗಲೆಲ್ಲ ಕನ್ನಡದ ಖ್ಯಾತ ಕವಿ ನಿಸಾರ್ ಅಹ್ಮದ್ ಅವರ ನಿತ್ಯೋತ್ಸವ ಕವನದ ಸಾಲುಗಳು ಕನ್ನಡಿಗರಿಗೆ ನೆನಪಾಗುತ್ತವೆ. ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಜೊಗ ಜಲಪಾತ ಈಗ ರುದ್ರ ರಮಣೀಯವಾಗಿ ಪ್ರವಾಸಿಗರಿಗೆ ಕಾಣಿಸುತ್ತಿದೆ. ನಿಸರ್ಗದ ಈ ದೃಶ್ಯ ವೈಭವ ನೋಡಲು ಎರಡು ಕಣ್ಣು ಸಾಲದು ಮಾರಾಯ್ರೇ. ಶರಾವತಿ
ನದಿಯು ಹಾಲ್ನೊರೆಯಂತೆ ಮೇಲಿಂದ ಕೆಳಭಾಗಕ್ಕೆ ಧುಮ್ಮಿಕ್ಕುತ್ತಿರುವ ದೃಶ್ಯ ಮನಸ್ಸಿಗೆ ಮುದ ನೀಡುವುದರ ಜೊತೆಗೆ ನಿಸರ್ಗದ ಅದ್ಭುತಗಳ ಬಗ್ಗೆ ಕೌತುಕಮ ಕುತೂಹಲ ಸೃಸ್ಟಿಸುತ್ತದೆ. ಜೋಗದ ರಾಜ, ರಾಣಿ ಮತ್ತು ರೋರರ್ ಜಲಪಾತಗಳನ್ನು ಮಳೆಗಾಲದಲ್ಲೇ ನೋಡಿ ಅವುಗಳ ಸೌಂದರ್ಯವನ್ನು ಆಸ್ವಾದಿಸಬೇಕು. ಜನರಿಗೆ ಇದು ಚೆನ್ನಾಗಿ ಗೊತ್ತಿದೆ, ಹಾಗಾಗೇ ತಂಡೋಪತಂಡವಾಗಿ ಅವರು ಜೋಗದ ಕಡೆ ಧಾವಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Jog Falls: ಇದು ನಯಾಗರ ಫಾಲ್ಸ್​ ಅಂದ್ಕೊಂಡ್ರಾ?; ಜೋಗ ಜಲಪಾತದ ರುದ್ರ ರಮಣೀಯ ವಿಡಿಯೋ ವೈರಲ್