Dr Raj Laddu| ಈ ಲಡ್ಡು ಗೆ ರಾಜ್ ಲಡ್ಡು ಅಂತಾನೇ ಹೆಸ್ರು ಬಂದಿದ್ದರ ಹಿಂದಿದೆ ರೋಚಕ ಸ್ಟೋರಿ

ಸಾಧು ಶ್ರೀನಾಥ್​
|

Updated on: Apr 14, 2021 | 10:05 AM

ವರನಟ ಡಾ.ರಾಜ್ ಕುಮಾರ್ ಕುಲಕೋಟಿ ಅಭಿಮಾನಿಗಳ ಆರಾಧ್ಯದೈವ ಇನ್ನಿಲ್ಲವಾಗಿ 15 ವರ್ಷ ಕಳೆದು ಹೋಗಿದೆ. ಅಣ್ಣಾವ್ರ ಪ್ರತಿ ಪುಣ್ಯಸ್ಮರಣೆ ಬಂದಾಗಲೂ ಇಡೀ ಕರುನಾಡೇ ಅವರನ್ನ ಸ್ಮರಿಸುತ್ತೆ.. ಅಂದಹಾಗೆ, ಅಣ್ಣಾವ್ರು ಮೆಚ್ಚಿ, ಇಷ್ಟ ಪಟ್ಟು ತಿನ್ನುತ್ತಿದ್ದ ಲಡ್ಡು ಯಾವುದು ಅಂತ ಬಹುತೇಕರಿಗೆ ಗೊತ್ತಿಲ್ಲ.. ಆ ಲಡ್ಡಿಗೆ ರಾಜ್ ಲಡ್ಡು ಅಂತಾನೇ ಹೆಸ್ರು ಕೂಡ ಬಂದಿದೆ.. ಹಾಗಾದ್ರೆ ಆ ಅಪರೂಪದ ಲಡ್ಡಿನ ಹಿಂದಿನ ರೋಚಕ ಸ್ಟೋರಿಯ ಜತೆಗೆ ರಾಜ್ ಲಡ್ಡು ಸಿಗೋದಾದ್ರು ಎಲ್ಲಿ ಅಂತ ತೋರಿಸ್ತಿವಿ ನೋಡಿ.