Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಟುಂಬದೊಂದಿಗೆ ತಿರುಪತಿ ತೆರಳಿ ತಿರುಮಲ ತಿಮ್ಮಪ್ಪನ ದರ್ಶನ ಪಡೆದ ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್

ಕುಟುಂಬದೊಂದಿಗೆ ತಿರುಪತಿ ತೆರಳಿ ತಿರುಮಲ ತಿಮ್ಮಪ್ಪನ ದರ್ಶನ ಪಡೆದ ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 22, 2024 | 5:30 PM

ಶನಿವಾರದಂದು ತಿರಮಲ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ತನ್ನ ಆಡುವ ದಿನಗಳಲ್ಲಿ ವೆರಿ ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಎಂದು ಗುರುತಿಸಿಕೊಳ್ಳುತ್ತಿದ್ದ ಅವರ ಕುಟುಂಬಕ್ಕೆ ತಿರುಮಲ ತಿರುಪತಿ ದೇವಸ್ಥಾನ ಅಧಿಕಾರಿಗಳು ವೆಂಕಟೇಶ್ವರನ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಿದ್ದರು. ಅಧಿಕಾರಿಗಳಿಗೆ ಮತ್ತು ದೇವಸ್ಥಾನದ ಅರ್ಚಕರು ಹಾಗೂ ಇತರ ಸಿಬ್ಬಂದಿಗೆ ಲಕ್ಷ್ಮಣ್ ಅವರನ್ನು ತೀರ ಹತ್ತಿರದಿಂದ ನೋಡುವ ಅವಕಾಶವೂ ಸಿಕ್ಕಿತು.

ತಿರುಪತಿ: ಅತ್ಯಾಕರ್ಷಕ ಶೈಲಿಯ ಬ್ಯಾಟಿಂಗ್ ಮೂಲಕ ಪ್ರೇಕ್ಷಕರನ್ನು ರಂಜಿಸುವ ಜೊತೆಗೆ ಅನೇಕ ಸಲ ಟೀಮ್ ಇಂಡಿಯವನ್ನು ಅಪಾಯದ ಸ್ಥಿತಿಯಿಂದ ಪಾರು ಮಾಡಿದ್ದ ಮತ್ತು ಹಲವಾರು ಗೆಲುವುಗಳನ್ನು ತಂದುಕೊಟ್ಟಿದ್ದ ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ (VVS Laxman) ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ (Tirumala Thimmappa) ದರ್ಶನ ಪಡೆದರು. ಶನಿವಾರದಂದು ತಿರಮಲ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ತನ್ನ ಆಡುವ ದಿನಗಳಲ್ಲಿ ವೆರಿ ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಎಂದು ಗುರುತಿಸಿಕೊಳ್ಳುತ್ತಿದ್ದ ಅವರ ಕುಟುಂಬಕ್ಕೆ ತಿರುಮಲ ತಿರುಪತಿ ದೇವಸ್ಥಾನ ಅಧಿಕಾರಿಗಳು ವೆಂಕಟೇಶ್ವರನ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಿದ್ದರು. ಅಧಿಕಾರಿಗಳಿಗೆ ಮತ್ತು ದೇವಸ್ಥಾನದ ಅರ್ಚಕರು ಹಾಗೂ ಇತರ ಸಿಬ್ಬಂದಿಗೆ ಲಕ್ಷ್ಮಣ್ ಅವರನ್ನು ತೀರ ಹತ್ತಿರದಿಂದ ನೋಡುವ ಅವಕಾಶವೂ ಸಿಕ್ಕಿತು. ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ ಬಳಿಕ ಲಕ್ಷ್ಮಣ್ ಕುಟುಂಬ ಮಲಯಪ್ಪ ಸ್ವಾಮಿಯ ದರ್ಶನವನ್ನೂ ಪಡೆದು ಅರ್ಚನೆ ಮಾಡಿಸಿದರು.

ಶ್ರೀ ರಂಗನಾಯಕ ಮಂಟಪದಲ್ಲಿ ವೇದ ವಿದ್ವಾಂಸರು ಲಕ್ಷ್ಮಣ ದಂಪತಿ ಹಾಗೂ ಕುಟುಂಬಸ್ಥರಿಗೆ ವೇದ ಆಶೀರ್ವಾದ ನೀಡಿದರು. ನಂತರ ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಧರ್ಮಾರೆಡ್ಡಿ, ದೇವಸ್ಥಾನದ ಅಧಿಕಾರಿಗಳು ಹಾಗೂ ಅರ್ಚಕರ ಸಮ್ಮುಖದಲ್ಲಿ ಲಕ್ಷ್ಮಣ್ ಕುಟುಂಬವು ವಿದ್ವಾಂಸರಿಗೆ ಮಾಲಾರ್ಪಣೆ ಮಾಡಿ ಗೌರವಿಸಿತು. ನಂತರ ದೇವಸ್ಥಾನದ ವತಿಯಿಂದ ಕುಟುಂಬಕ್ಕೆ ತೀರ್ಥ ಪ್ರಸಾದ ವಿತರಿಲಾಯಿತು. ದರ್ಶನ ಮುಗಿಸಿ ಹೊರ ಬರುತ್ತಿದ್ದ ಲಕ್ಷ್ಮಣ್ ಅವರನ್ನು ಗಮನಿಸಿದ ಅಭಿಮಾನಿಗಳು ಹಾಗೂ ಭಕ್ತರು ಸೆಲ್ಫಿಗಾಗಿ ಮುಗಿಬಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    VVS Laxman: ದ್ರಾವಿಡ್‌ ಸ್ಥಾನ ತುಂಬಲಾರೆ! ಎನ್​ಸಿಎ ಮುಖ್ಯಸ್ಥ ಹುದ್ದೆಯನ್ನು ತಿರಸ್ಕರಿಸಿದ ವಿವಿಎಸ್ ಲಕ್ಷ್ಮಣ್

Published on: Apr 22, 2024 05:08 PM