Rahul Dravid: ರಾಹುಲ್ ದ್ರಾವಿಡ್ ಅವಧಿ ಅಂತ್ಯ: ವಿವಿಎಸ್ ಲಕ್ಷ್ಮಣ್ ಯುಗ ಆರಂಭ: ಅಧಿಕೃತ ಘೋಷಣೆಯಷ್ಟೇ ಬಾಕಿ

VVS Laxman Team India New Coach: ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ಲಕ್ಷ್ಮಣ್ ಅವರು ಮುಖ್ಯ ಕೋಚ್ ಸ್ಥಾನಕ್ಕೆ ಆಸಕ್ತಿ ತೋರಿಸಿದ್ದಾರಂತೆ. ಅವರು ಟೀಮ್ ಇಂಡಿಯಾದ ಮುಖ್ಯ ತರಬೇತುದಾರರಾಗಿ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎನ್ನಲಾಗಿದೆ.

Rahul Dravid: ರಾಹುಲ್ ದ್ರಾವಿಡ್ ಅವಧಿ ಅಂತ್ಯ: ವಿವಿಎಸ್ ಲಕ್ಷ್ಮಣ್ ಯುಗ ಆರಂಭ: ಅಧಿಕೃತ ಘೋಷಣೆಯಷ್ಟೇ ಬಾಕಿ
VVS Laxman and Rahul Dravid
Follow us
Vinay Bhat
|

Updated on: Nov 23, 2023 | 12:45 PM

ಐಸಿಸಿ ಏಕದಿನ ವಿಶ್ವಕಪ್ 2023ರ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲು ಟೀಮ್ ಇಂಡಿಯಾದ ಒಂದು ಯುಗದ ಮುಕ್ತಾಯವನ್ನು ಸೂಚಿಸಿದೆ. ಏಕದಿನ ವಿಶ್ವಕಪ್ 2023 ರ ನಂತರ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಭಾರತೀಯ ತಂಡದೊಂದಿಗೆ ತನ್ನ ಎರಡು ವರ್ಷಗಳ ಒಪ್ಪಂದವನ್ನು ವಿಸ್ತರಿಸಲು ಆಸಕ್ತಿ ತೋರಿಸುತ್ತಿಲ್ಲ ಎಂದು ವರದಿಗಳು ಬಹಿರಂಗಪಡಿಸುತ್ತವೆ. ಪ್ರಸ್ತುತ ಎಸ್​ಸಿಎ ನಿರ್ದೇಶಕ ವಿವಿಎಸ್ ಲಕ್ಷ್ಮಣ್ ಅವರು ದ್ರಾವಿಡ್ ಬದಲಿಗೆ ಮುಖ್ಯ ಕೋಚ್ ಆಗಿ ಆಯ್ಕೆ ಆಗಲಿದ್ದಾರೆ ಎನ್ನಲಾಗಿದೆ.

ಬಿಸಿಸಿಐ ಮೂಲಗಳು ಈ ವಿಚಾರವನ್ನು ಟೈಮ್ಸ್ ಆಫ್ ಇಂಡಿಯಾಕ್ಕೆ ದೃಢಪಡಿಸಿದೆ. ಸದ್ಯ ವೈಜಾಗ್‌ನಲ್ಲಿ ಇಂದಿನಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20I ಸರಣಿಗೆ ದ್ರಾವಿಡ್ ಅವರ ಆಪ್ತ ಸ್ನೇಹಿತ ಲಕ್ಷ್ಮಣ್ ಕೋಚ್ ಆಗಿ ಆಯ್ಕೆ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ಲಕ್ಷ್ಮಣ್ ಅವರು ಮುಖ್ಯ ಕೋಚ್ ಸ್ಥಾನಕ್ಕೆ ಆಸಕ್ತಿ ತೋರಿಸಿದ್ದಾರಂತೆ. ಅವರು ಟೀಮ್ ಇಂಡಿಯಾದ ಮುಖ್ಯ ತರಬೇತುದಾರರಾಗಿ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎನ್ನಲಾಗಿದೆ.

ರಾಹುಲ್ ದ್ರಾವಿಡ್ ಅವಧಿಯ ಅಂತ್ಯ-ವಿವಿಎಸ್ ಲಕ್ಷ್ಮಣ್ ಯುಗ ಆರಂಭ!

ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್‌ನಲ್ಲಿನ ಸೋಲು ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ”ಲಕ್ಷ್ಮಣ್ ಅವರು ಕೋಚ್ ಸ್ಥಾನಕ್ಕೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಸಮಯದಲ್ಲಿ, ಲಕ್ಷ್ಮಣ್ ಬಿಸಿಸಿಐನ ಉನ್ನತ ಮುಖ್ಯಸ್ಥರನ್ನು ಭೇಟಿ ಮಾಡಲು ಅಹ್ಮದಾಬಾದ್‌ಗೆ ಕೂಡ ತೆರಳಿದ್ದರು. ಅವರು ಟೀಮ್ ಇಂಡಿಯಾ ಕೋಚ್ ಆಗಿ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ ಮತ್ತು ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಅವರು ಖಾಯಂ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ,” ಎಂದು ಬಿಸಿಸಿಐ TOI ಗೆ ತಿಳಿಸಿದೆ.

ಇದನ್ನೂ ಓದಿ
Image
ಆಸೀಸ್ ತಂಡದಲ್ಲಿ ಭಾರತೀಯ: ಇಂದು ಕಣಕ್ಕಿಳಿಯಲಿರುವ ತನ್ವೀರ್ ಸಂಘ ಯಾರು?
Image
ಪ್ಯಾಟ್ ಕಮ್ಮಿನ್ಸ್​ರನ್ನು ಆಸ್ಟ್ರೇಲಿಯಾ ಹೇಗೆ ನಡೆಸಿಕೊಂಡಿತು ನೋಡಿ
Image
ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್​ಗೆ ಭಾರೀ ಅವಮಾನ
Image
ರಿಂಕು ಸಿಂಗ್ ಫಿನಿಶರ್: ಆಸೀಸ್ ವಿರುದ್ಧದ ಮೊದಲ ಟಿ20ಗೆ ಭಾರತ ಪ್ಲೇಯಿಂಗ್ XI

IND vs AUS 1st T20I: ಇಂದು ಭಾರತ-ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯ: ಸೇಡಿಗೆ ಕಾದು ಕುಳಿತಿದೆ ಸೂರ್ಯ ಪಡೆ

ಸದ್ಯ ಹೊಸ ಕೋಚಿಂಗ್ ಆಡಳಿತದಲ್ಲಿ ಟೀಮ್ ಇಂಡಿಯಾ ಯಾವ ದಿಕ್ಕಿನತ್ತ ಸಾಗಲಿದೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಮತ್ತು ಕುತೂಹಲವಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20I ಡಿಸೆಂಬರ್ 10 ರಂದು ನಿಗದಿಯಾಗಿದೆ. ಇದಕ್ಕಾಗಿ ಡಿಸೆಂಬರ್ 5 ರೊಳಗೆ ಹರಿಣಗಳ ನಾಡಿಗೆ ನಿರ್ಗಮಿಸುವ ನಿರೀಕ್ಷೆಯಿದೆ.

ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಅವಧಿಯಲ್ಲಿ ಭಾರತ, ಏಷ್ಯಾಕಪ್‌ನಲ್ಲಿ ಜಯ, ಏಕದಿನ ವಿಶ್ವಕಪ್ ಫೈನಲ್‌, ಮತ್ತು ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಝಿಲೆಂಡ್ ವಿರುದ್ಧ ಟೆಸ್ಟ್ ಸರಣಿಗಳನ್ನು ಗೆದ್ದಂತಹ ಗಮನಾರ್ಹ ಸಾಧನೆ ಮಾಡಿದೆ. ಆದಾಗ್ಯೂ, ವಿಶ್ವಕಪ್ ಫೈನಲ್​ನಲ್ಲಿನ ಸೋಲು ದ್ರಾವಿಡ್ ಕೋಚ್ ಸ್ಥಾನಕ್ಕೆ ಮಹತ್ವದ ತಿರುವು ನೀಡಿತು. ಸದ್ಯದಲ್ಲೇ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್ ಎಂದು ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ