ಹೆಬ್ಬಾಳ್ಕರ್-ರವಿ ಪ್ರಕರಣಕ್ಕೆ ಇತಿಶ್ರೀ ಹಾಡಬೇಕೆಂದಿದ್ದೆ, ಆದರೆ ಎಲ್ಲರೂ ತಮ್ಮ ನಿಲುವುಗಳಿಗೆ ಬದ್ಧರಾಗಿದ್ದಾರೆ: ಬಸವರಾಜ ಹೊರಟ್ಟಿ, ಸಭಾಪತಿ

|

Updated on: Dec 30, 2024 | 4:16 PM

ಒಬ್ಬ ಮಹಿಳಾ ಸದಸ್ಯರ ವಿಷಯದಲ್ಲಿ ಅಂಥ ಪದ ಬಳಸಬಾರದು, ಹಾಗಾಗಿ ಅದನ್ನು ಕಡತದಿಂದ ತೆಗೆದು ಹಾಕಲಾಗಿದೆ ಆದರೆ ಈಗ ಅದನ್ನು ಹುಡುಕುವ ಪ್ರಯತ್ನ ನಡೆದಿದೆ. ಒಂದು ಪಕ್ಷ ರವಿ ಬಳಸಿದರೆನ್ನಲಾಗುತ್ತಿರುವ ಪದ ಸಿಕ್ಕರೆ ಮೇಲ್ಮನೆಯ ನಿಯಮಾವಳಿಗಳ ಪ್ರಕಾರ ರವಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೊರಟ್ಟಿ ಹೇಳಿದರು.

ಹುಬ್ಬಳ್ಳಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿಧಾನ ಪರಿಷತ್ ಚೇರ್ಮನ್ ಬಸವರಾಜ ಹೊರಟ್ಟಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಪರಿಷತ್ ಸದಸ್ಯ ಸಿಟಿ ರವಿ ಬಳಸಿದರೆನ್ನಲಾಗುತ್ತಿರುವ ಅವಾಚ್ಯ ಪದದ ಪ್ರಕರಣವನ್ನು ತಾನು ಇಷ್ಟಕ್ಕೆ ಮುಗಿಸಿ ಮುಂದೆ ಸಾಗಬೇಕೆಂದು ಬಯಸಿದ್ದೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆಯೂ ಮಾಡಿದ್ದೆ, ಅದರೆ ಎಲ್ಲರೂ ತಮ್ಮ ತಮ್ಮ ನಿಲುವುಗಳಿಗೆ ಬದ್ಧರಾಗಿರುವುದರಿಂದ ತಾವೇನೂ ಮಾಡಲಾಗುತ್ತಿಲ್ಲ ಎಂದು ಅಸಹಾಯಕತೆಯನ್ನು ಪ್ರದರ್ಶಿಸಿದರು. ಪ್ರಕರಣ ಈಗ ರಾಜಕೀಯವಾಗಿ ಮಾರ್ಪಟ್ಟಿರುವುದರಿಂದ ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾರ ಪಕ್ಷವನ್ನೂ ವಹಿಸಲಾರೆ, ಆ ಪೀಠದ ಮೇಲೆ ಆಸೀನನಾದಾಗ ತನಗೆ ಎಲ್ಲ ಸದಸ್ಯರು ಒಂದೇ ಎಂದು ಹೊರಟ್ಟಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಸವರಾಜ ಹೊರಟ್ಟಿ ವಿರುದ್ಧ FIR ದಾಖಲಿಸದ ಡಿಜಿಪಿ, ಎಸ್​ಪಿಗೆ ನೋಟಿಸ್​ ಜಾರಿ