Assembly Session: ಸದನದಲ್ಲಿ ಸಿಟ್ಟಿಗೆದ್ದ ಸಿದ್ದರಾಮಯ್ಯ ಕೋಪದಿಂದ ಭುಸುಗುಟ್ಟಿದ ಯತ್ನಾಳ್

|

Updated on: Jul 15, 2024 | 6:16 PM

Assembly Session: ಸದನದಲ್ಲಿ ಸಿದ್ದರಾಮಯ್ಯ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಎಷ್ಟೇ ಬಿರುಸಿನ ಚರ್ಚೆ ನಡೆದರೂ, ಅವರಿಬ್ಬರ ನಡುವೆ ಆತ್ಮೀಯತೆ, ಸಲುಗೆ ಮತ್ತು ಪರಸ್ಪರ ಗೌರವಾದರಗಳಿವೆ. ಕಳೆದ ವರ್ಷ ಯತ್ನಾಳ್ ಸದನದಲ್ಲಿ ಆವೇಶಕ್ಕೊಗಾಗಿ ರಕ್ತದೊತ್ತಡದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರಿದ್ದರು. ಎಲ್ಲರಿಗಿಂತ ಮೊದಲು ಅವರ ಆರೋಗ್ಯ ವಿಚಾರಸಲು ಆಸ್ಪತ್ರೆಗೆ ಹೋಗಿದ್ದು ಸಿದ್ದರಾಮಯ್ಯ!

ಬೆಂಗಳೂರು: ಸದನದ ಕಲಾಪ ನಡೆಯುವಾಗ ಸಿದ್ದರಾಮಯ್ಯ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಮಾತಿನ ಕಾಳಗ ನಡೆಯದಿದ್ದರೆ ಕಲಾಪ ಅಪೂರ್ಣವೆನಿಸುತ್ತದೆ. ಮುಂಗಾರು ಅಧಿವೇಶನದ ಮೊದಲ ದಿನವೇ ಅಂಥ ಸನ್ನಿವೇಶ ನೋಡಲು ಸಿಕ್ಕಿತು. ವಾಲ್ಮೀಕಿ ನಿಗಮದ ಹಗರಣವನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ, ನಮ್ಮ ಸರ್ಕಾರ ತನಿಖೆಗಾಗಿ ಎಸ್ಐಟಿ ರಚಿಸಿದೆ ಮತ್ತು ಪ್ರಕರಣ ಮುಕ್ಕಾಲು ಭಾಗ ತನಿಖೆ ಮುಗಿದಿದೆ, ಆದರೂ ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗಬಾರದು ಅನ್ನೋ ಕಾರಣಕ್ಕೆ ಚರ್ಚೆ ಮಾಡಲು ಸಿದ್ಧರಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದಾಗ ಯತ್ನಾಳ್ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಅನ್ನುತ್ತಾರೆ. ಹಾಗಾದರೆ ನೀವ್ಯಾಕೆ ವೀರಯ್ಯ ಪ್ರಕರಣ ತನಿಖೆಗೆ ಒಪ್ಪಿಸಲಿಲ್ಲ, ಅಂತ ಸಿಎಂ ಹೇಳಿದಾಗ, ಅಡ್ಜಸ್ಟ್ ಮೆಂಟ್ ರಾಜಕಾರಣ ಬೇಡ, ಎರಡೂ ಪಾರ್ಟಿಗಳು ಸ್ವಚ್ಛವಾಗಬೇಕು, ಸಿಬಿಐ ತನಿಖೆಗೆ ಕೊಡಿ ಅಂತ ಯತ್ನಾಳ್ ಹೇಳುತ್ತಾರೆ. ತಾಳ್ಮೆ ಕಳೆದುಕೊಳ್ಳುವ ಸಿದ್ದರಾಮಯ್ಯ, ಕೇಂದ್ರದಲ್ಲಿ ಸಚಿವರಾಗಿದ್ದ ನಿಮಗೆ ಸೀರಿಯಸ್​ನೆಸ್ಸೇ ಇಲ್ವಲ್ಲ? ನಿಮ್ಮ ಒಂದು ನಿಲುವು ಕೂಡ ಸ್ಪಷ್ಟವಾಗಿರಲ್ಲ, ಒಮ್ಮೆ ಹೇಳ್ತೀರಿ ₹2,500 ಕೋಟಿ ಕೊಟ್ಟಿದ್ದರೆ ನಾನು ಮುಖ್ಯಮಂತ್ರಿ ಆಗ್ತಿದ್ದೆ ಅಂತ, ಅಮೇಲೆ ಹೇಳಿಕೆಯಿಂದ ವಿಮುಖರಾಗ್ತೀರಿ ಎಂದು ಹೇಳುತ್ತಾರೆ. ಆಗ ರೊಚ್ಚಿಗೇಳುವ ಯತ್ನಾಳ್ ನಿಮಗೆ ತಾಕತ್ತಿದ್ದರೆ ಸಿಬಿಐ ಕೊಡಿ ಅಂತ ಗಟ್ಟಿ ಧ್ವನಿಯಲ್ಲಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ವಾಲ್ಮೀಕಿ ನಿಗಮದ ಹಗರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಪಾಟೀಲ್ ಯತ್ನಾಳ್

Follow us on