‘ದರ್ಶನ್ ನೋಡಬೇಕು’: ಚಿತ್ರದುರ್ಗದಿಂದ ಬಂದು ಜೈಲಿನ ಹೊರಗೆ ಕಾದ ಫ್ಯಾನ್ಸ್

‘ದರ್ಶನ್ ನೋಡಬೇಕು’: ಚಿತ್ರದುರ್ಗದಿಂದ ಬಂದು ಜೈಲಿನ ಹೊರಗೆ ಕಾದ ಫ್ಯಾನ್ಸ್

ರಾಮು, ಆನೇಕಲ್​
| Updated By: ಮದನ್​ ಕುಮಾರ್​

Updated on: Jul 15, 2024 | 7:19 PM

ಜೈಲಿನಲ್ಲಿ ಇರುವ ನಟ ದರ್ಶನ್​ ಅವರನ್ನು ಭೇಟಿ ಮಾಡಲು ಕುಟುಂಬದವರಿಗೆ ಮತ್ತು ಆಪ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಅಭಿಮಾನಿಗಳನ್ನು ಜೈಲಿನ ಒಳಗೆ ಬಿಡುತ್ತಿಲ್ಲ. ಹಾಗಿದ್ದರೂ ಕೂಡ ಪ್ರತಿ ದಿನ ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂದು ಕಾಯುತ್ತಿದ್ದಾರೆ. ಚಿತ್ರದುರ್ಗದಿಂದ ಬಂದ ಮಹಿಳಾಭಿಮಾನಿಯೊಬ್ಬರು ದರ್ಶನ್​ ಭೇಟಿಗಾಗಿ ಕಾದಿದ್ದಾರೆ.

ರೇಣುಕಾ ಸ್ವಾಮಿಯ ಕೊಲೆಯ ಕೇಸ್​ನಲ್ಲಿ ನಟ ದರ್ಶನ್​ ಎ2 ಆಗಿದ್ದು, ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಅವರನ್ನು ನೋಡಲು ಚಿತ್ರದುರ್ಗದಿಂದ ಬಂದ ಕಾವ್ಯಾ ಎಂಬ ಎಂಬ ಅಭಿಮಾನಿಯು ಸ್ನೇಹಿತೆ ರಚ್ಚು ಜೊತೆ ಪರಪ್ಪನ ಅಗ್ರಹಾರ ಜೈಲಿನ ಎದುರು ಕಾದಿದ್ದಾರೆ. ಈ ವೇಳೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಡಿ ಬಾಸ್​ ಅವರನ್ನು ನೋಡಲು ನಾನು ದಾವಣಗೆರೆಯಿಂದ ಬಂದಿದ್ದೇನೆ. ನಿನ್ನೆ ಕೂಡ ಬಂದಿದ್ದೆವು. ಪೊಲೀಸರು ಬಿಡಲಿಲ್ಲ. ಇಂದು ಸಹ ದರ್ಶನ್​ ಅವರನ್ನು ನೋಡಲು ಪ್ರಯತ್ನ ಮಾಡುತ್ತಿದ್ದೇವೆ. ಅಭಿಮಾನಿಗಳನ್ನು ಒಳಗೆ ಬಿಡಲ್ಲ ಅಂತ ಪೊಲೀಸರು ಹೇಳ್ತಿದ್ದಾರೆ. ನಮಗೆ ತುಂಬ ಬೇಸರ ಆಗಿದೆ’ ಎಂದು ದರ್ಶನ್​ ಅಭಿಮಾನಿ ಕಾವ್ಯಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.