Mysuru Dasara Mahotsav-2024: ಸಂತಸಭರಿತ ರೈತನನ್ನು ನೋಡುವುದಕ್ಕಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ: ಸಿದ್ದರಾಮಯ್ಯ
Mysuru Dasara Mahotsav-2024: ವಿಜಯದಶಮಿ ಆಚರಣೆಯ ಕಾರಣ ವಿವರಿಸಿದ ಸಿದ್ದರಾಮಯ್ಯ, ಹಬ್ಬವು ಶಿಷ್ಟ ರಕ್ಷಣೆ ಮತ್ತು ದುಷ್ಟ ಸಂಹಾರದ ದ್ಯೋತಕವಾಗಿದೆ, ಬೇರೆಯವರ ಬದುಕನ್ನು ಹಾಳು ಮಾಡಲು ಬಯಸುವವರಿಗೆ ಮತ್ತು ಕೇವಲ ಕೆಟ್ಟದ್ದನ್ನು ಮಾತ್ರ ಯೋಚನೆ ಮಾಡುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ ಎಂದರು.
ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಮೊದಲು ಮಾಧ್ಯಮದವರೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿ ದಸರಾ ಉತ್ಸವದ ಪ್ರಮುಖ ಸಂಗತಿಯೆಂದರೆ ನಾಡಿನ್ಯಾದ್ಯಂತ ಉತ್ತಮ ಮಳೆಯಾದ ಕಾರಣ ಸಮೃದ್ಧ ಬೆಳೆ ಕಾಣುತ್ತಿರುವ ರೈತನ ಮೊಗದಲ್ಲಿ ಸಂತಸವಿದೆ, ನೆಮ್ಮದಿಯ ರೈತನನ್ನು ನೋಡಿ ಸಿಗುವ ಸಂತೋಷಕ್ಕಿಂತ ದೊಡ್ಡದು ಮತ್ತೊಂದಿಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಜೃಂಭಣೆಯಿಂದ ನಡೆಯುವ ಉಡುಪಿಯ ಉಚ್ಚಿಲ ಮಹಾಲಕ್ಷ್ಮೀ ದಸರಾ ಮಹೋತ್ಸವದ ವಿಶೇಷತೆ ತಿಳಿಯಿರಿ