Karwar News: ಅಂಕೋಲಾ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನೀರು ಸರಬರಾಜು ಪೈಪ್ ಒಡೆದು ಕಾರಂಜಿಯಂತೆ ಚಿಮ್ಮಿದ ನೀರು!
ಅಸಲಿಗೆ ವಾಸ್ತವ ಸಂಗತಿಯೇನೆಂದರೆ ಕಾರವಾರ ತಾಲ್ಲೂಕಿನ ಬಿಣಗಾ ಗ್ರಾಮದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರಿನ ಪೈಪ್ ಒಡೆದು ಹೋಗಿರುವುದರಿಂದ ಈ ಅವಾಂತರ ಸೃಷ್ಟಿಯಾಗಿದೆ.
ಕಾರವಾರ: ಗೊಂದಲಕ್ಕೆ ಬೀಳಬೇಡಿ, ಇಲ್ಲಿ ಕಾಣುತ್ತಿರುವ ದೃಶ್ಯ ಜಲಪಾತಲ್ಲ (waterfalls). ಜಲಪಾತಗಳಲ್ಲಿ ನೀರು ಮೇಲಿಂದ ಅಂದರೆ ಎತ್ತರ ಪ್ರದೇಶದಿಂದ ಕೆಳಗೆ ಧುಮ್ಮಿಕ್ಕುತ್ತದೆ ಆದರೆ ಇಲ್ಲಿ ನೀರು ಭಾರೀ ಫೋರ್ಸ್ ನಿಂದ ಕಾರಂಜಿಯಂತೆ (fountain) ಮೇಲಕ್ಕೆ ಚಿಮ್ಮುತ್ತಿದೆ! ಅಸಲಿಗೆ ವಾಸ್ತವ ಸಂಗತಿಯೇನೆಂದರೆ ಕಾರವಾರ ತಾಲ್ಲೂಕಿನ ಬಿಣಗಾ ಗ್ರಾಮದ (Binaga village) ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರಿನ ಪೈಪ್ ಒಡೆದು ಹೋಗಿರುವುದರಿಂದ ಈ ಅವಾಂತರ ಸೃಷ್ಟಿಯಾಗಿದೆ. ಅಂಕೋಲಾದಿಂದ ಕಾರವಾರಕ್ಕೆ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ಆದಿತ್ಯ ಬಿರ್ಲಾ ಕಾರ್ಖಾನೆ ಬಳಿ ಒಡೆದಿದೆ. ನೀರಿನ ಒತ್ತಡ ತಾಳಲಾಗದೆ ಸಿಮೆಂಟ್ ಪೈಪ್ ಒಡೆದಿದೆ ಅಂತ ಶಂಕಿಸಲಾಗಿದೆ. ಒಡೆದ ಪೈಪನ್ನು ರಿಪೇರಿ ಮಾಡಬೇಕಾದರೆ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಬೇಕು. ಕಾರವಾರದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅದನ್ನೇ ಮಾಡುತ್ತಿರುವುದು ವರದಿಯಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ