Bengaluru News: ಸೇವೆಯಲ್ಲಿ ದಕ್ಷತೆ ಮತ್ತು ಶಿಸ್ತು ಮೆರೆದ ಪೊಲೀಸ್ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ರಿಂದ ಸನ್ಮಾನ

Bengaluru News: ಸೇವೆಯಲ್ಲಿ ದಕ್ಷತೆ ಮತ್ತು ಶಿಸ್ತು ಮೆರೆದ ಪೊಲೀಸ್ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ರಿಂದ ಸನ್ಮಾನ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 28, 2023 | 12:48 PM

ಆಯುಕ್ತ ದಯಾನಂದ್ ಅವರಿಂದ ಪ್ರಶಸ್ತಿ ಪತ್ರ ವಿತರಣೆಗೆ ಮೊದಲು ಮೈದಾನದಲ್ಲಿ ನಗರ ಸಶಸ್ತ್ರ ಮೀಸಲು ಪಡೆಯಿಂದ ಕವಾಯತು ನಡೆಯಿತು.

ಬೆಂಗಳೂರು: ಕಾರ್ಯಕ್ಷೇತ್ರ ಯಾವುದೇ ಆಗಿರಲಿ, ಮಾಡುವ ಸೇವೆಗೆ ಮನ್ನಣೆ ಸಿಕ್ಕರೆ ಉಂಟಾಗುವ ಸಂತಸ, ಅಭಿಮಾನ ವರ್ಣಿಸಲಸಾಧ್ಯ. ಸಿಗುವ ಮನ್ನಣೆ ಅಭಿನಂದನಾ ಪತ್ರವಾಗಿರಬಹುದು (letter of appreciation) ಅಥವಾ ನಗದು ಮತ್ತು ಪ್ರಶಸ್ತಿ ಪತ್ರವಾಗಿರಬಹುದು-ಪಡೆದವರು ಖುಷಿಯಿಂದ ಬೀಗುತ್ತಾರೆ. ಪೊಲೀಸರು ಮಾಡುವ ಕೆಲಸವನ್ನು ಥ್ಯಾಂಕ್ ಲೆಸ್ ಜಾಬ್ (thankless job) ಅನ್ನೋದುಂಟು. ಯಾಕೆಂದರೆ ಅವರು ಮಾಡುವ ಕೆಲಸದ ಸ್ವರೂಪವೇ ಹಾಗೆ. ಆದರೆ, ಈ ಕ್ಷೇತ್ರದ ಹಲವಾರು ಉದ್ಯೋಗಿಗಳು ದಕ್ಷತೆ, ಪ್ರಾಮಾಣಿಕತೆ ಮತ್ತು ಶಿಸ್ತಿನಿಂದ ಸೇವೆ ಸಲ್ಲಿಸಿ ತಮ್ಮ ಮೇಲಾಧಿಕಾರಿ, ಇಲಾಖೆ ಮತ್ತು ಸರ್ಕಾರದ ಗಮನ ಸೆಳೆಯುತ್ತಾರೆ. ನಗರದ ಚಾಮರಾಜಪೇಟೆಯಲ್ಲಿರುವ ಸಿಎಅರ್ ಮೈದಾನದಲ್ಲಿ ನಡೆದ ಪೊಲೀಸ್ ಕಾರ್ಯಕ್ರಮದಲ್ಲಿ ಅಂಥವರನ್ನು ಗುರುತಿಸಿ ಪ್ರಶಸ್ತಿ ಪತ್ರಗಳಿಂದ ಗೌರವಿಸಲಾಯಿತು. ಬೆಂಗಳೂರು ಪೊಲೀಸ್ ಕಮೀಶನರ್ ಬಿ ದಯಾನಂದ (B Dayanand) ಅಭಿನಂದನಾ ಪತ್ರಗಳನ್ನು ನೀಡಿದರು. ಅದಕ್ಕೂ ಮೊದಲು ಮೈದಾನದಲ್ಲಿ ನಗರ ಸಶಸ್ತ್ರ ಮೀಸಲು ಪಡೆಯಿಂದ ಕವಾಯತು ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ