ಕೊಪ್ಪಳ: ಕೃಷ್ಣ ಬಿ ಸ್ಕೀಮ್ ಏತ ನೀರಾವರಿ ಯೋಜನೆ ಪೈಪ್ ಒಡೆದು ಊರು-ಹೊಲ-ಗದ್ದೆಗಳಲ್ಲಿ ನೀರು!

ಕೊಪ್ಪಳ: ಕೃಷ್ಣ ಬಿ ಸ್ಕೀಮ್ ಏತ ನೀರಾವರಿ ಯೋಜನೆ ಪೈಪ್ ಒಡೆದು ಊರು-ಹೊಲ-ಗದ್ದೆಗಳಲ್ಲಿ ನೀರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Apr 26, 2022 | 7:27 PM

ಸ್ಥಳದಲ್ಲಿರುವ ವ್ಯಕ್ತಿಯೊಬ್ಬರು ಪ್ರವಾಹ ರೂಪದಲ್ಲಿ ನೀರು ಹರಿದು ಆಗುತ್ತಿರುವ ಅನಾಹುತಗಳ ಬಗ್ಗೆ ಹಿನ್ನೆಲೆಯಲ್ಲಿ ವಿವರಣೆ ನೀಡುತ್ತಿದ್ದಾರೆ. ಜಮೀನುಗಳಲ್ಲಿ 3-4 ಅಡಿಗಳಷ್ಟು ನೀರು ನಿಂತಿದೆಯಂತೆ. ಹತ್ತಿದಲ್ಲಿರುವ ಇಟ್ಟಿಗೆ ತಯಾರಿಸುವ ಕಾರ್ಖಾನೆಯೊಂದಕ್ಕೆ ನೀರಿ ನುಗ್ಗಿ ಅದು ಹಾಳಾಗಿದೆ.

Koppal: ಅನಾವೃಷ್ಟಿ ಸಮಯದಲ್ಲಿ ನೀರಿನ ಅಭಾವ ಏನೆಲ್ಲ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಅಂತ ರೈತಾಪಿ ಸಮುದಾಯಕ್ಕೆ ಚೆನ್ನಾಗಿ ಗೊತ್ತಿದೆ, ಹಾಗಾಗಿ ಅವರು ಯಾವತ್ತೂ ನೀರನ್ನು ಪೋಲು ಮಾಡಿದವರಲ್ಲ. ಇಲ್ಲಿ ಈ ಪಾಟಿ ನೀರು ವ್ಯರ್ಥವಾಗಿ ಹರಿದುಹೋಗುತ್ತಿರುವುದಕ್ಕೆ ರೈತರನ್ನು ದೂರಬೇಡಿ, ಇದು ಅವರ ತಪ್ಪಲ್ಲ. ಕೊಪ್ಪಳ ಜಿಲ್ಲೆ ಕುಷ್ಟಗಿ (Kushtagi) ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ಕೃಷ್ಣ ಬಿ ಸ್ಕೀಮ್ ಏತ ನೀರಾವರಿ ಯೋಜನೆ (Krsihna B Scheme Lift Irrigation Project) ಅಡಿ ನಡೆದಿರುವ ಕಳಪೆ ಕಾಮಗಾರಿ (Substandard Works) ಬಗ್ಗೆ ರೈತರು ಕಾಮಗಾರಿ ಆರಂಭವಾದಾಗಿನಿಂದ ದೂರುತ್ತಿದ್ದಾರೆ. ಕಳಪೆ ಕಾಮಗಾರಿಯ ಒಂದು ನಮೂನೆ ಈ ವಿಡಿಯೋನಲ್ಲಿ ನಿಮಗೆ ಕಾಣುತ್ತಿದೆ. ಸದರಿ ಯೋಜನೆಯ ಒಂದು ಪೈಪ್ ಒಡೆದು ಅಪಾರ ಪ್ರಮಾಣದ ನೀರು ರೈತರ ಜಮೀನಗಳಿಗೆ ಅಕ್ಕಪಕ್ಕದ ಊರುಗಳಿಗೆ ನುಗ್ಗುತ್ತಿದೆ.

ಸ್ಥಳದಲ್ಲಿರುವ ವ್ಯಕ್ತಿಯೊಬ್ಬರು ಪ್ರವಾಹ ರೂಪದಲ್ಲಿ ನೀರು ಹರಿದು ಆಗುತ್ತಿರುವ ಅನಾಹುತಗಳ ಬಗ್ಗೆ ಹಿನ್ನೆಲೆಯಲ್ಲಿ ವಿವರಣೆ ನೀಡುತ್ತಿದ್ದಾರೆ. ಜಮೀನುಗಳಲ್ಲಿ 3-4 ಅಡಿಗಳಷ್ಟು ನೀರು ನಿಂತಿದೆಯಂತೆ. ಹತ್ತಿದಲ್ಲಿರುವ ಇಟ್ಟಿಗೆ ತಯಾರಿಸುವ ಕಾರ್ಖಾನೆಯೊಂದಕ್ಕೆ ನೀರಿ ನುಗ್ಗಿ ಅದು ಹಾಳಾಗಿದೆ. ಹರಿಯುತ್ತಿರುವ ನೀರಿನಿಂದಾಗಿ ಎರಡು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿದು ಹೋಗಿದೆ ಎಂದು ಅವರು ಹೇಳುತ್ತಿದ್ದಾರೆ.

ಇದೇ ಭಾಗದ ಒಬ್ಬ ರೈತ ಪೈಪ್ ಒಡೆದು 2-3 ಗಂಟೆಗಳಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಅಗಮಿಸಿ ದುರಸ್ತಿ ಮಾಡುವ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳು ಬೇಗ ಬರದಿದ್ದರೆ ಸುತ್ತಮುತ್ತ ಹೊಲಗಳಲ್ಲಿನ ಪೈರು ನಾಶವಾಗಲಿದೆ ಎಂದು ಅವರು ಹೇಳುತ್ತಾರೆ. ಒಂದು ಭಾಗದಲ್ಲಿ ಮಕ್ಕಳು ರಭಸವಾಗಿ ಹರಿಯುತ್ತಿರುವ ನೀರಲ್ಲಿ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟುತ್ತಿರುವುದು ಕಾಣುತ್ತದೆ.

ಇದನ್ನೂ ಓದಿ:  Video: ಬಂಧಿತ ಸಂಸದೆ ನವನೀತ್​ ರಾಣಾ ಆರೋಪಕ್ಕೆ ವಿಡಿಯೋ ಮೂಲಕ ತಿರುಗೇಟು ಕೊಟ್ಟ ಮುಂಬೈ ಪೊಲೀಸ್​ ಆಯುಕ್ತ ಸಂಜಯ್ ಪಾಂಡೆ

Published on: Apr 26, 2022 07:27 PM