ಕಬಿನಿ ಜಲಾಶಯದಿಂದ ನೀರು ರಿಲೀಸ್; ನದಿ ಪಾತ್ರದ ಜನರಿಗೆ ಮೈಸೂರು ಜಿಲ್ಲಾಡಳಿತ ಎಚ್ಚರಿಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 13, 2024 | 9:12 PM

ರಾಜ್ಯದ ಹಲವೆಡೆ ವರುಣನ ಆರ್ಭಟ ಜೋರಾಗಿದ್ದು, ಬಹುತೇಕ ಜಲಾಶಯಗಳು ಭರ್ತಿಯಾಗಿದೆ. ಕೇರಳದ ವಯನಾಡಿನಲ್ಲಿ ಮಳೆ‌(Rain)ಯ ಪ್ರಮಾಣ ಹೆಚ್ಚಿದ್ದು, ಈ ಹಿನ್ನಲೆ ಮೈಸೂರು ಜಿಲ್ಲೆಯ ಹೆಚ್​.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಸಮೀಪದ ಕಬಿನಿ ಜಲಾಶಯ(Kabini Dam)ದಿಂದ ಮತ್ತಷ್ಟು ನೀರು ಬಿಡುಗಡೆ ಮಾಡಿದೆ.

ಮೈಸೂರು, ಜು.13: ಕೇರಳದ ವಯನಾಡಿನಲ್ಲಿ ಮಳೆ‌(Rain)ಯ ಪ್ರಮಾಣ ಹೆಚ್ಚಿದ್ದು, ಈ ಹಿನ್ನಲೆ ಮೈಸೂರು ಜಿಲ್ಲೆಯ ಹೆಚ್​.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಸಮೀಪದ ಕಬಿನಿ ಜಲಾಶಯ(Kabini Dam)ದಿಂದ ಮತ್ತಷ್ಟು ನೀರು ಬಿಡುಗಡೆ ಮಾಡಿದೆ. ಹೌದು, ಜಲಾಶಯದ ಮಟ್ಟ 83.30 ಅಡಿ ತಲುಪಿದ್ದರಿಂದ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇನ್ನು ಈ ಡ್ಯಾಂ, 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ‌ ಹೊಂದಿದೆ. ಸದ್ಯ ಜಲಾಶಯದಲ್ಲಿ 19.06 ಟಿಎಂಸಿ ನೀರು ಸಂಗ್ರಹವಾಗಿದೆ. ಜೊತೆಗೆ 19,181 ಕ್ಯೂಸೆಕ್ ಜಲಾಶಯದ ಒಳಹರಿವು ಇದೆ. ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ ಹಿನ್ನಲೆ ನದಿ ಪಾತ್ರದ ಜನರಿಗೆ ಮೈಸೂರು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ