Karnataka Dam Water Level: 50ರ ಸಂಭ್ರಮ ಹೊತ್ತಲ್ಲೇ ಕಬಿನಿ ಡ್ಯಾಂ ಬಹುತೇಕ ಭರ್ತಿ, ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ ಇಲ್ಲಿದೆ

ಕೇರಳ ಮತ್ತು ಕಬಿನಿ ಜಲಾಶಯ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಜಲಾಶಯಕ್ಕೆ ನಿತ್ಯ 4-5 ಸಾವಿರ ಕ್ಯೂಸೆಕ್​ ನೀರು ಹರಿದು ಬರುತ್ತಿದೆ. ಹಾಗಾದರೆ ಕಬಿನಿ ಸೇರಿದಂತೆ ಕರ್ನಾಟಕದ ಡ್ಯಾಂಗಳಲ್ಲಿ ಇಂದು (ಜು.10) ನೀರಿನ ಮಟ್ಟ ಎಷ್ಟಿದೆ ಅಂತ ತಿಳಿಯಲು ಇಲ್ಲಿದೆ ವಿವರ.

Karnataka Dam Water Level: 50ರ ಸಂಭ್ರಮ ಹೊತ್ತಲ್ಲೇ ಕಬಿನಿ ಡ್ಯಾಂ ಬಹುತೇಕ ಭರ್ತಿ, ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ ಇಲ್ಲಿದೆ
ಕಬಿನಿ ಜಲಾಶಯ
Follow us
ವಿವೇಕ ಬಿರಾದಾರ
|

Updated on:Jul 10, 2024 | 7:53 AM

ಕಬಿನಿ ಜಲಾಶಯ ನಿರ್ಮಾಣವಾಗಿ 50 ವರ್ಷಗಳನ್ನು ಪೂರೈಸಿರುವ ಸುವರ್ಣ ಸಂಭ್ರಮದ ಜೊತೆಗೆ ಈ ವರ್ಷ ಜುಲೈ ಮೊದಲ ವಾರದಲ್ಲೇ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದ್ದು ಸಂಭ್ರಮವಾಗಿದೆ. 10 ವರ್ಷಗಳಲ್ಲಿ ಎರಡನೇ ಬಾರಿಗೆ ಜುಲೈ ಮೊದಲ ವಾರದಲ್ಲೆ ಜಲಾಶಯ ಬಹುತೇಕ ಭರ್ತಿಯಾಗಿದೆ. ಕಬಿನಿ ಸೇರಿದಂತೆ ರಾಜ್ಯದ 14 ಜಲಾಶಯಗಳ ಇಂದಿನ (ಜು.10) ನೀರಿನ ಮಟ್ಟ (Karnataka Dam Water Level), ಒಳಹರಿವು, ಹೊರಹರಿವು ಬಗ್ಗೆ ಇಲ್ಲಿದೆ ಮಾಹಿತಿ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.60 123.08 71.39 19.04 78668 430
ತುಂಗಭದ್ರಾ ಜಲಾಶಯ (Tungabhadra Dam) 497.71 105.79 22.82 3.08 23079 235
ಮಲಪ್ರಭಾ ಜಲಾಶಯ (Malaprabha Dam) 633.80 37.73 10.93 6.84 25079 235
ಕೆ.ಆರ್.ಎಸ್ (KRS Dam) 38.04 49.45 25.59 12.92 6600 574
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 40.71 19.05 23420 1405
ಕಬಿನಿ ಜಲಾಶಯ (Kabini Dam) 696.13 19.52 18.52 9.99 6148 2000
ಭದ್ರಾ ಜಲಾಶಯ (Bhadra Dam) 657.73 71.54 23.09 27.06 7806 156
ಘಟಪ್ರಭಾ ಜಲಾಶಯ (Ghataprabha Dam) 662.91 51.00 21.10 4.48 25079 235
ಹೇಮಾವತಿ ಜಲಾಶಯ (Hemavathi Dam) 890.58 37.10 18.81 15.15 6166 250
ವರಾಹಿ ಜಲಾಶಯ (Varahi Dam) 594.36 31.10 6.41 3.80 3058 0
ಹಾರಂಗಿ ಜಲಾಶಯ (Harangi Dam)​​ 871.38 8.50 5.76 3.81 2121 700
ಸೂಫಾ (Supa Dam) 564.00 145.33 45.15 32.66 19685 2032
ನಾರಾಯಣಪುರ ಜಲಾಶಯ (Narayanpura Dam) 492.25 33.31 21.16 14.16 201 201
ವಾಣಿವಿಲಾಸ ಸಾಗರ (VaniVilas Sagar Dam) 652.24 30.42 18.06 24.84 0 147

2284 ಅಡಿ ಗರಿಷ್ಟ ಮಟ್ಟದ ಕರ್ನಾಟಕದ ಕಬಿನಿ ಜಲಾಶಯದಲ್ಲಿ 2282.45 ಅಡಿ ನೀರಿದೆ. ಜಲಾಶಯದ ಭದ್ರತೆ ಮತ್ತು ಸಂರಕ್ಷಣೆ ದೃಷ್ಟಿಯಿಂದ ಜಲಾಶಯದಿಂದ 3 ಸಾವಿರ ಕ್ಯೂಸೆಕ್​ ನೀರನ್ನು ನದಿಗೆ ಬಿಡಲಾಗುತ್ತಿದೆ. ಈ ಮೂಲಕ ಕಬಿನಿ ಜಲಾಶಯ ಭರ್ತಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:52 am, Wed, 10 July 24