Wayanad Disaster: ಒಂದೇ ದಿನದಲ್ಲಿ ನರಕವಾಯ್ತು ಪ್ರವಾಸಿಗರ ಸ್ವರ್ಗ ವಯನಾಡ್

|

Updated on: Jul 31, 2024 | 7:38 PM

Wayanad Landslide: ಕೇರಳದ ವಯನಾಡಿನಲ್ಲಿ ಉಂಟಾಗಿರುವ ಪ್ರವಾಹ, ಭೂಕುಸಿತದಲ್ಲಿ ಸಿಲುಕಿರುವವರ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ನೂರಾರು ಕುಟುಂಬಗಳು ಕೊಚ್ಚಿಹೋಗಿದ್ದು, ಮೃತದೇಹಗಳನ್ನು ಪತ್ತೆಹಚ್ಚಲು ಕೂಡ ಕೆಲವು ಕುಟುಂಬಗಳಲ್ಲಿ ಯಾರೂ ಬದುಕುಳಿದಿಲ್ಲ. ಪ್ರವಾಸಿಗರ ಪಾಲಿನ ಸ್ವರ್ಗವಾಗಿದ್ದ ವಯನಾಡು ಸಂಪೂರ್ಣ ಕೊಚ್ಚಿಹೋಗಿ, ಹೆಣಗಳಿಂದ ತುಂಬಿದ ನರಕದಂತೆ ಕಾಣುತ್ತಿದೆ.

ಕೇರಳದ ವಯನಾಡಿನಲ್ಲಿ ಸಾವಿನ ಸಂಖ್ಯೆ 225ಕ್ಕೆ ಏರಿಕೆಯಾಗಿದೆ. ಸೇನಾ ಅಧಿಕಾರಿಗಳನ್ನು ಸಹಾಯಕ್ಕಾಗಿ ವಯನಾಡಿಗೆ ಕಳುಹಿಸಲಾಗಿದೆ. ವಯನಾಡಿನಲ್ಲಿ ಭೂಕುಸಿತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಇನ್ನೂ ಹೆಚ್ಚಿನ ಅಪಾಯವನ್ನು ಎದುರಿಸಲು SDF ಮತ್ತು NDRF ತಂಡಗಳು ಸ್ಥಳದಲ್ಲಿಯೇ ಬೀಡುಬಿಟ್ಟಿವೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ಭೂಕುಸಿತದ ಭೀತಿ ಎದುರಾಗಿದೆ.

ಪ್ರಾಕೃತಿಕ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದ್ದ ವಯನಾಡು ಈಗ ಕೆಸರಿನಿಂದ ಆವೃತವಾಗಿ ಭಯಾನಕವಾಗಿ ಕಾಣುತ್ತಿದೆ. ಇಲ್ಲಿನ ಕೆಲವು ಗ್ರಾಮಗಳೇ ಕಣ್ಮರೆಯಾಗಿದ್ದು, ನೂರಾರು ಶವಗಳು ಇನ್ನೂ ಕೆಸರಿನಡಿ ಹೂತುಹೋಗಿವೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on