VIDEO: 12 ವೈಡ್, 1 ನೋ ಬಾಲ್… ಓವರ್ ಮುಗಿಯುವ ಮುನ್ನವೇ ಪಂದ್ಯವೇ ಮುಗಿದು ಹೋಯ್ತು!
World Championship of Legends 2025: ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ 14ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ ಪಾಕಿಸ್ತಾನ್ ಚಾಂಪಿಯನ್ಸ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿದೆ.
ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ 14ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ ಪಾಕಿಸ್ತಾನ್ ಚಾಂಪಿಯನ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವು ಸಯೀದ್ ಅಜ್ಮಲ್ ಅವರ ಸ್ಪಿನ್ ಮೋಡಿಗೆ ತತ್ತರಿಸಿದೆ. 3.5 ಓವರ್ಗಳನ್ನು ಎಸೆದ ಅಜ್ಮಲ್ ಕೇವಲ 16 ರನ್ ನೀಡಿ 6 ವಿಕೆಟ್ ಕಬಳಿಸಿದರು. ಪರಿಣಾಮ 11.5 ಓವರ್ಗಳಲ್ಲಿ ಕೇವಲ 74 ರನ್ಗಳಿಸಿ ಆಸ್ಟ್ರೇಲಿಯಾ ತಂಡ ಆಲೌಟ್ ಆಗಿದೆ.
ಅದರಂತೆ 75 ರನ್ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು 7 ಓವರ್ಗಳಲ್ಲಿ 55 ರನ್ ಕಲೆಹಾಕಿದ್ದರು. ಆದರೆ 8ನೇ ಓವರ್ನಲ್ಲಿ ಪಂದ್ಯ ಮುಗಿದು ಹೋಯಿತು. ಹೀಗೆ ಒಂದೇ ಓವರ್ನಲ್ಲಿ ಪಂದ್ಯ ಮುಗಿಯಲು ಕಾರಣ ಜಾನ್ ಹೇಸ್ಟಿಂಗ್ಸ್ ಅವರ ದೀರ್ಘಾವಧಿಯ ಬೌಲಿಂಗ್.
8ನೇ ಓವರ್ನಲ್ಲಿ ದಾಳಿಗಿಳಿದ ಜಾನ್ ಹೇಸ್ಟಿಂಗ್ಸ್ ಬರೋಬ್ಬರಿ 12 ವೈಡ್ಗಳನ್ನು ಎಸೆದಿದ್ದಾರೆ. ಇದರ ನಡುವೆ ಒಂದು ನೋ ಬಾಲ್ ಕೂಡ ಮಾಡಿದರು. ಈ ಮೂಲಕ 18 ಎಸೆತಗಳನ್ನು ಎಸೆದು ಬರೋಬ್ಬರಿ 19 ರನ್ ನೀಡಿದರು. ಇದಾಗ್ಯೂ ಹೇಸ್ಟಿಂಗ್ಗೆ ಓವರ್ ಮುಗಿಸಲು ಸಾಧ್ಯವಾಗಲಿಲ್ಲ ಎಂಬುದು ವಿಶೇಷ.
ಏಕೆಂದರೆ ಜಾನ್ ಹೇಸ್ಟಿಂಗ್ ತನ್ನ ಓವರ್ನ 5ನೇ ಎಸೆತವನ್ನು ಪೂರ್ಣಗೊಳಿಸುತ್ತಿದ್ದಂತೆ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು 75 ರನ್ಗಳ ಗುರಿ ಮುಟ್ಟಿದೆ. ಅಂದರೆ ಹೇಸ್ಟಿಂಗ್ಸ್ ಅವರ ಓವರ್ ಮುಗಿಯುವ ಮುನ್ನವೇ ಆಸ್ಟ್ರೇಲಿಯಾ-ಪಾಕಿಸ್ತಾನ್ ನಡುವಣ ಪಂದ್ಯ ಮುಗಿದು ಹೋಗಿದೆ. ಇದೀಗ ಆಸ್ಟ್ರೇಲಿಯಾ ಆಟಗಾರನ ಓವರ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

