ಫ್ಯಾನ್ ಪೇಜ್ ನಿರ್ವಹಣೆಗೆ ದರ್ಶನ್ 25 ಲಕ್ಷ ಖರ್ಚು ಮಾಡ್ತಾರೆ; ಲಾಯರ್ ಜಗದೀಶ್
ಜಗದೀಶ್ ಅವರು ಆಗಾಗ ದರ್ಶನ್ ಅಭಿಮಾನಿಗಳ ವಿರುದ್ಧ ಕೂಗಾಟ ನಡೆಸುತ್ತಾ ಇರುತ್ತಾರೆ. ಈಗ ಅವರು ಒಂದು ಹೊಸ ಆರೋಪ ಮಾಡಿದ್ದಾರೆ. ದರ್ಶನ್ ಫ್ಯಾನ್ಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ದರ್ಶನ್ ಫ್ಯಾನ್ ಪೇಜ್ಗಳ ನಿರ್ವಹಣಗೆ 25 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ.
ದರ್ಶನ್ ಫ್ಯಾನ್ ಪೇಜ್ಗಳ ಮೇಲೆ ಸಾಕಷ್ಟು ಆರೋಪಗಳು ಬಂದಿವೆ. ಅವರು ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ವಿಚಾರ ಸಾಕಷ್ಟು ಸುದ್ದಿ ಆಗಿದೆ. ಹೀಗಿರುವಾಗಲೇ ಲಾಯರ್ ಜಗದೀಶ್ ಅವರು ಒಂದಷ್ಟು ಆರೋಪ ಮಾಡಿದ್ದಾರೆ. ದರ್ಶನ್ (Darshan) ಫ್ಯಾನ್ ಪೇಜ್ಗಳ ನಿರ್ವಹಣೆಗೆ ಪ್ರತಿ ತಿಂಗಳು 25 ಲಕ್ಷ ರೂಪಾಯಿ ಪೂರೈಕೆ ಆಗುತ್ತಿದೆ ಎಂದು ಲಾಯರ್ ಜಗದೀಶ್ ಅವರು ಆರೋಪಿಸಿದ್ದಾರೆ. ರಜನಿ ಎಕ್ಸ್ಪ್ರೆಸ್ ಎಂಬುವವರು ಈ ಗ್ರೂಪ್ನ ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರನ್ನು ವಿಚಾರಣೆ ನಡೆಸಿ ಎಲ್ಲಾ ಮಾಹಿತಿ ಹೊರ ತೆಗೆಯಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jul 30, 2025 11:44 AM

