VIDEO: ವರ್ಷಗಳು ಕಳೆದರೂ ಬದಲಾಗದ ಪಾಕಿಸ್ತಾನ್ ವಿಕೆಟ್ ಕೀಪರ್

Updated on: Jul 19, 2025 | 1:01 PM

WCL 2025: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 160 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಚಾಂಪಿಯನ್ಸ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 155 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು 5 ರನ್​ಗಳ ರೋಚಕ ಜಯ ಸಾಧಿಸಿದೆ. 

ಪಾಕಿಸ್ತಾನ್ ಕ್ರಿಕೆಟ್​ ಕಂಡಂತಹ ಅತ್ಯಂತ ಕಳಪೆ ವಿಕೆಟ್ ಕೀಪರ್ ಯಾರೆಂದು ಕೇಳಿದರೆ ಥಟ್ಟನೆ ಬರುವ ಉತ್ತರ ಕಮ್ರಾನ್ ಅಕ್ಮಲ್. ಇದನ್ನು ಖುದ್ದು ಪಾಕ್ ವೇಗಿ ಶೊಯೆಬ್ ಅಖ್ತರ್ ಕೂಡ ಹೇಳಿದ್ದಾರೆ. ಸುಲಭ ಕ್ಯಾಚ್, ಸ್ಟಂಪಿಂಗ್ ಅವಕಾಶಗಳನ್ನು ಕೈಚೆಲ್ಲುವ ಮೂಲಕ ಸದಾ ಸುದ್ದಿಯಲ್ಲಿದ್ದ ಕಮ್ರಾನ್ ಅಕ್ಮಲ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಕೂಡ ಸ್ಟಂಪಿಂಗ್ ಅವಕಾಶವನ್ನು ಕೈ ಚೆಲ್ಲುವ ಮೂಲಕವೇ ಸುದ್ದಿಯಾಗಿರುವುದು ವಿಶೇಷ.

ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ವರ್ಲ್ಡ್​ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್ ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಚಾಂಪಿಯನ್ಸ್ ತಂಡ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 160 ರನ್ ಕಲೆಹಾಕಿತು.

161 ರನ್​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಚಾಂಪಿಯನ್ಸ್ ಪರ ಫಿಲ್ ಮಸ್ಟರ್ಡ್ ಹಾಗೂ ಅಲಸ್ಟೈರ್ ಕುಕ್ ಇನಿಂಗ್ಸ್ ಆರಂಭಿಸಿದ್ದರು. ಇತ್ತ ಪವರ್​ ಪ್ಲೇಯ ಕೊನೆಯ ಓವರ್​ನಲ್ಲಿ ಸ್ಪಿನ್ನರ್ ಶೊಯೆಬ್ ಮಲಿಕ್ ದಾಳಿಗಿಳಿದರು. ಸ್ಪಿನ್ ಎಸೆತದಲ್ಲಿ ಭರ್ಜರಿ ಪ್ರಯತ್ಯುತ್ತರ ನೀಡಲು ಮಸ್ಟರ್ಡ್​ ಮುನ್ನುಗ್ಗಿ ಬಂದು ಹೊಡೆಯುವ ಪ್ರಯತ್ನ ಮಾಡಿದರು. ಆದರೆ ಚೆಂಡು ಬ್ಯಾಟ್​​ಗೆ ತಾಗದೇ ನೇರವಾಗಿ ವಿಕೆಟ್ ಕೀಪರ್​ನತ್ತ ಸಾಗಿತು.

ಅತ್ತ ಚೆಂಡು ಹಿಡಿದು ಸುಲಭವಾಗಿ ಸ್ಟಂಪ್ ಔಟ್ ಮಾಡುವ ಅವಕಾಶ ಕಮ್ರಾನ್ ಅಕ್ಮಲ್​ಗೆ ಒದಗಿ ಬಂದಿತ್ತು. ಆದರೆ ಚೆಂಡನ್ನು ಸರಿಯಾಗಿ ಗುರುತಿಸುವಲ್ಲಿ ಎಡವಿದ ಕಮ್ರಾನ್ ಸ್ಟಂಪ್ ಔಟ್ ಅವಕಾಶವನ್ನು ತಪ್ಪಿಸಿಕೊಂಡರು. ಇದೀಗ ಕ್ರಮಾನ್ ಅಕ್ಮಲ್ ಅವರ ಕಳಪೆ ಕೀಪಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದು ಕೂಡ ವರ್ಷಗಳು ಕಳೆದರೂ ಬದಲಾಗದ ಕ್ರಮಾನ್ ಅಕ್ಮಲ್ ಎಂಬ ಟ್ರೋಲ್​ನೊಂದಿಗೆ ಎಂಬುದು ವಿಶೇಷ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 160 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಚಾಂಪಿಯನ್ಸ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 155 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು 5 ರನ್​ಗಳ ರೋಚಕ ಜಯ ಸಾಧಿಸಿದೆ.

Published on: Jul 19, 2025 01:00 PM