AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಧನಾ ಸಮಾವೇಶದಲ್ಲಿ ಕುರ್ಚಿಗಳ ಮೇಲಿದ್ದ ಸಿದ್ದರಾಮಯ್ಯನವರ ಫೋಟೋಗಳನ್ನು ತೆಗೆಸಿದ್ದು ಯಾಕೆ?

ಸಾಧನಾ ಸಮಾವೇಶದಲ್ಲಿ ಕುರ್ಚಿಗಳ ಮೇಲಿದ್ದ ಸಿದ್ದರಾಮಯ್ಯನವರ ಫೋಟೋಗಳನ್ನು ತೆಗೆಸಿದ್ದು ಯಾಕೆ?

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 19, 2025 | 1:40 PM

Share

ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಇಷ್ಟೆಲ್ಲ ಕಸರತ್ತು ಎಂದು ವಿರೋಧ ಪಕ್ಷದ ನಾಯಕರು ಲೇವಡಿ ಮಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಇಂಥ ಮಾತಿಗಳಿಗೆಲ್ಲ ಕಿವಿಗೊಡಲ್ಲ. ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಿದ ನಂತರವೇ ಸಿದ್ದರಾಮಯ್ಯ ತಮ್ಮ ಶಾಸಕರಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ ಅಂತಲೂ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅದು ಹಾಗಲ್ಲ ಅಂತ ಸಿದ್ದರಾಮಯ್ಯ ಹೇಳಲಾರರು.

ಮೈಸೂರು, ಜುಲೈ 19: ಪ್ರಚಾರದ ಗೀಳಿಗೆ ಒಂದು ಮಿತಿ ಬೇಡ್ವಾ ಸ್ವಾಮಿ ಅಂತ ಟಿವಿ9 ಬೆಳಗ್ಗೆ ಕೇಳಿದ್ದು ಕೆಲಸ ಮಾಡಿದಂತಿದೆ. ತವರು ಜಿಲ್ಲೆ ಮೈಸೂರಲ್ಲೇ ತನ್ನ ಜನಪ್ರಿಯತೆ ಕುಗ್ಗಿದೆ ಅಂತ ಅನುಮಾನಕ್ಕೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಅದನ್ನು ಪುನರ್​​ಸ್ಥಾಪಿಸುವ ಭಾಗವಾಗಿ ಸಾಧನಾ ಸಮಾವೇಶಕ್ಕೆಂದು (Sadhana Samavesha) ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ವ್ಯವಸ್ಥೆಗೊಳಿಸಿದ ಕುರ್ಚಿಗಳ ಮೇಲೆ ತಮ್ಮ ಭಾವಚಿತ್ರವನ್ನು ಇರಿಸುವ ಸೂಚನೆ ನೀಡಿದ್ದರು. ಅವುಗಳನ್ನು ಈಗ ತೆಗೆಯುತ್ತಿರುವ ದೃಶ್ಯವನ್ನು ಇಲ್ಲಿ ನೋಡಬಹುದು. ಈ ಕ್ರಮ ಹೇಗೆ ಜನಪ್ರಿಯತೆ ಹೆಚ್ಚಿಸಲು ಕಾರಣವಾಗುತ್ತದೆ ಅಂತ ಸಿದ್ದರಾಮಯ್ಯನವರೇ ಹೇಳಬೇಕು. ಕಾರ್ಯಕ್ರಮವನ್ನು ಸರ್ಕಾರದ ಸಾಧನಾ ಸಮಾವೇಶ ಅಂತ ಭಾವಿಸಲಾಗಿತ್ತು. ಆದರೆ ನಡೆಯುತ್ತಿರೋದೇ ಬೇರೆ, ಅಥವಾ ಸರ್ಕಾರವೆಂದರೆ ಸಿದ್ದರಾಮಯ್ಯ ಮಾತ್ರ ಅಂತಲೂ ಇರಬಹುದು ಮಾರಾಯ್ರೇ!

ಇದನ್ನೂ ಓದಿ:  ಒಡಂಬಡಿಕೆಯಾಗಿದ್ದರೆ ಸಿದ್ದರಾಮಯ್ಯನವರು ಶಿವಕುಮಾರ್​ಗೆ ಅಧಿಕಾರ ಬಿಟ್ಟುಕೊಡಬೇಕು: ಶ್ರೀಶೈಲ ಜಗದ್ಗುರುಗಳು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ