ಒಡಂಬಡಿಕೆಯಾಗಿದ್ದರೆ ಸಿದ್ದರಾಮಯ್ಯನವರು ಶಿವಕುಮಾರ್ಗೆ ಅಧಿಕಾರ ಬಿಟ್ಟುಕೊಡಬೇಕು: ಶ್ರೀಶೈಲ ಜಗದ್ಗುರುಗಳು
ಹಿಂದೂಗಳ ಹತ್ಯೆಯಾಗುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ ಮತ್ತು ಅದು ಖಂಡನೀಯ, ನಮ್ಮ ದೇಶ ಹಲವಾರು ಸಂಪ್ರದಾಯ ಮತ್ತು ಸಂಸ್ಕತಿಗಳ ನೆಲೆವೀಡಾಗಿದೆ, ಪರಧರ್ಮ ಸಹಿಷ್ಣುತೆ ಎಲ್ಲ ಭಾರತೀಯರ ಬದುಕಿನ ಮಾರ್ಗವಾಗಿದೆ ಧರ್ಮದ ಹಿನ್ನೆಲೆಯಲ್ಲಿ ದ್ವೇಷವನ್ನು ಪಸರಿಸುವುದು ಮತ್ತು ಸಾಧಿಸುವುದು ಒಪ್ಪತಕ್ಕ ಮಾತಲ್ಲ ಎಂದು ಶ್ರೀಶೈಲ ಜಗದ್ಗುರುಗಳು ಹೇಳಿದರು.
ಬಾಗಲಕೋಟೆ, ಜುಲೈ 16: ಹೈಕಮಾಂಡ್ ಮಧ್ಯಸ್ಥಿಕೆಯಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ ನಡುವೆ ಏನು ಒಡಂಬಡಿಕೆಯಾಗಿದೆಯೋ ಗೊತ್ತಿಲ್ಲ, ಹಾಗಾಗಿ ಅಧಿಕಾರ ಹಂಚಿಕೆ ವಿಷಯದಲ್ಲಿ ಮಾತಾಡೋದು ಸೂಕ್ತ ಅಲ್ಲ ಎಂದು ಶ್ರೀಶೈಲ ಜಗದ್ಗುರು ಡಾ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. ಬಾಗಲಕೋಟೆಯಲ್ಲಿ ಮಾಧ್ಯಮದವರ ಜೊತೆ ಮಾತಾಡಿದ ಅವರು ಒಂದು ವೇಳೆ ಒಡಂಬಡಿಕೆಯಾಗಿದ್ದೇ ನಿಜವಾದರೆ, ಸಿದ್ದರಾಮಯ್ಯನವರು ಸ್ಥಾನವನ್ನು ಶಿವಕುಮಾರ್ಗೆ ಬಿಟ್ಟುಕೊಡಬೇಕು ಎಂದು ಹೇಳಿದ ಸ್ವಾಮೀಜಿ ಇಬ್ಬರೂ ರಾಜಕೀಯ ಮುತ್ಸದ್ದಿಗಳು ಮತ್ತು ಅಪಾರ ಅನುಭವವುಳ್ಳವರು ಎಂದರು. ರಾಜಕಾರಣಿಗಳು ಯಾರೇ ಆಗಿರಲಿ, ಕುರ್ಚಿಗಾಗಿ ಬಡಿದಾಡುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ: kodimatha Swamiji Predictions: ರಾಜಕಾರಣ, ಪ್ರಕೃತಿ ವಿಕೋಪ, ಯುದ್ಧದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಟಿ ರಮ್ಯಾಗೆ ಅಶ್ಲೀಲ ಕಮೆಂಟ್: ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಏನು?

ಕುತ್ತಿಗೆಗೆ ಗುಂಡೇಟು, ಪೆಟ್ರೋಲ್ ಬಂಕ್ಗೆ ಬಂದು ಸಹಾಯ ಕೇಳಿದ ಯುವಕ

‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು

PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
