kodimatha Swamiji Predictions: ರಾಜಕಾರಣ, ಪ್ರಕೃತಿ ವಿಕೋಪ, ಯುದ್ಧದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ
ಹಾಸನ ಜಿಲ್ಲೆಯ ಅರಸಿಕೇರೆಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ನುಡಿದ ಕೆಲ ಭವಿಷ್ಯಗಳು ನಿಜವಾಗಿವೆ. ಇದಕ್ಕೆ ಪೂರಕವೆಂಬಂತೆ ಜಗತ್ತಿಗೆ ಒಮದು ರೋಗ ಕಾಡಲಿದ್ದು, ಸಾವು ನೋವು ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಕೊರೋನಾ ಅಪ್ಪಳಿಸಿತ್ತು. ಹೀಗಾಗಿ ಇವರ ಭವಿಷ್ಯ ಬಹಳ ಮಹತ್ವ ಪಡೆದುಕೊಂಡಿದೆ. ಇನ್ನು ಬಾಗಲಕೋಟೆಗೆ ಭೇಟಿ ನೀಡಿರುವ ಕೋಡಿಮಠದ ಸ್ವಾಮೀಜಿ, ರಾಜಕೀಯ, ಪ್ರಕೃತಿ ವಿಕೋಪ, ದೇಶಗಳ ನಡುವಿನ ಸಂಘರ್ಷಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಬಾಗಲಕೋಟೆ, (ಮೇ 04): ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿ (Kodimatha dr shivananda shivayogi Rajendra Swamiji) ಅವರು ಇಂದು(ಮೇ 04) ಬಾಗಲಕೋಟೆ (Bagalkot) ಜಿಲ್ಲಾ ಪ್ರವಾಸದಲ್ಲಿದ್ದು, ಈ ವೇಳೆ ಅನೇಕ ವಿಚಾರಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ರಾಜಕಾರಣ, ಪ್ರಕೃತಿ ವಿಕೋಪ (natural disasters ), ದೇಶ ವಿದೇಶದ ಸಂಘರ್ಷಗಳು, ರೋಗ, ಯುದ್ಧಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಅದರಲ್ಲೂ ಮುಖ್ಯವಾಗಿ ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಮಾತುಗಳನ್ನಾಡಿದ್ದು, ಯುದ್ದ ಆಗುವ ಲಕ್ಷಣ ಇದೆ ಎಂದು ಭವಿಷ್ಯ ನುಡಿದಿದ್ದಾರೆ. ಪಹಲ್ಗಾಮ್ ದಾಳಿ ಹಿನ್ನೆಲೆ ದೇಶದಲ್ಲಿ ಯುದ್ದ ಭೀತಿ ಇದೆ. ಯುದ್ದ ಅಲ್ಲಗಳೆಯುವಂತಿಲ್ಲ. ಮತೀಯ ಮತಾಂಧತೆ ಗೊಂದಲ ಬಹಳ ಹೆಚ್ಚಾಗುತ್ತದೆ. ಇನ್ನು ಜನಗಳಲ್ಲಿ ಸಾವು ನೋವುಗಳು ಹೆಚ್ಚಾಗುತ್ತದೆ. ಕಂದಕ ಉಂಟಾಗುತ್ತದೆ. ಅದು ಯಾರಿಗೂ ಶಾಂತಿ ಕೊಡುವಂತ ಪ್ರಸಂಗವಲ್ಲ,ಆದ್ದರಿಂದ ಯುದ್ದದ ಭೀತಿ ಇದೆ ಎಂದಿದ್ದಾರೆ.
ಯುದ್ದ ಮಾಡುವವರು ತಯಾರಿದಾರೆ
ಯುಗಾದಿ ಭವಿಷ್ಯದಲ್ಲಿ ನಾವು ಹೇಳಿದ್ದೆವು.ಉತ್ತರದ ನಾಡಿನಲ್ಲಿ ಹಗೆಯ ಹೆಬ್ಬೇಗೆ ಹಬ್ಬೀತು, ಹುಟ್ಟೀತು ಸುತ್ತುವರೆದು ಬರುವಾಗ ಜಗವೆಲ್ಲ ಕೋಳಾದೀತು. ಸಾಮೂಹಿಕ ಹತ್ಯೆಯಾಗುತ್ತದೆ ಅಂತ. ಅದು ಹೇಳಿದ ಕೆಲ ದಿನಗಳಲ್ಲಿ ಕಾಶ್ಮೀರದಲ್ಲಿ ಹತ್ಯೆ ಆಯ್ತು. ಅದು ಜಗತ್ತಿನಾದ್ಯಂತ ಪ್ರಸಾರ ಆಗುತ್ತದೆ. ಆಗಲೇ ಶುರುವಾಗಿದೆ ಎಂದು ತಮ್ಮ ಭವಿಷ್ಯ ಸಮರ್ಥಿಸಿಕೊಂಡರು. ಯುದ್ದ ತಯಾರಿ ಬಗ್ಗೆ ಮಾತಾಡುತ್ತಾ ಯುದ್ದ ಮಾಡುವವರು ತಯಾರಿದಾರೆ. ಯುದ್ದ ಮಾಡಿಸಿಕೊಳ್ಳುವವರು ಹೆದರುತ್ತಿದ್ದಾರೆ. ಎದುರಾಳಿ ಕೂಡ ಹಾಗೆ ಇರಬೇಕು ತಾನೆ ಎದುರಾಳಿ ಬೆಚ್ಚಿದಾಗ ಯಾರ ಮೇಲೆ ಯುದ್ದ ಮಾಡೋದು ಎಂದ ಶ್ರೀ ಆದರೆ ಯುದ್ಧದ ಲಕ್ಷಣ ಇದೆ ಎಂದರು.
ಇದನ್ನೂ ಓದಿ: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಹತ್ಯೆ ಬಗ್ಗೆ ಮಾತಾಡಿದ ಕೋಡಿಶ್ರೀ, ಹಿಂದೆ ರಾಜರು ಮಹಾರಾಜರು ಚಕ್ರವರ್ತಿಗಳು ಇದ್ದರು.ಅವರ ಹತ್ತಿರ ಒಂದು ಸೀಟ್ ಯಾವಾಗಲೂ ಗುರುಗಳಿಗೆ ಅಂತ ಇತ್ತು.ಅವರು ಏನೇ ಮಾಡ್ತಾ ಇದ್ದರು ಗುರುಗಳನ್ನು ಕೇಳ್ತಿದ್ದರು.ಗುರು ಅಂದರೆ ಧರ್ಮ ಅಂತ ,ಧರ್ಮ ಬಿಟ್ಟು ಮಾಡ್ತಿರಲಿಲ್ಲ.ಈಗ ಬರುವಂತವರಿಗೆ ಗುರಿನೂ ಇಲ್ಲ ಗುರುನೂ ಇಲ್ಲ.ಅವರು ಹೇಳಿದ್ದೇ ಧರ್ಮ ಮಾಡಿದ್ದೇ ಆಚಾರ.ಇಂತಹ ಪ್ರಸಂಗ ಇರುವಾಗ ಯಾವುದೇ ಧರ್ಮ ಇರಲಿ ಮಾನವೀಯ ಮೌಲ್ಯ ಒಳಗೊಂಡಿರಬೇಕು ಅದು. ದಯೆ ಇಲ್ಲದ ಧರ್ಮ ಅದಾವುದು.ದಯವೆ ಧರ್ಮದ ಮೂಲ.ದಯೆ ಇಲ್ಲದ ಧರ್ಮ ಧರ್ಮವೇ ಅಲ್ಲ.ಆ ದೃಷ್ಟಿಯಿಂದ ಯಾರೇ ತಪ್ಪು ಮಾಡಿದರೂ ತಪ್ಪೆ.ಕುರಾನ್ ನಲ್ಲಿ ಹೇಳ್ತಾರೆ ಸಣ್ಣ ಕ್ರಿಮಿಯನ್ನು ಕೊಲ್ಲಬಾರದು ಅಂತ.ಕೊಂದರೆ ಸಾವಿರ ಜನರ ಕೊಂದಷ್ಟು ಪಾಪ ಬರುತ್ತೆ ಅಂತ.ಅಂತಹ ಮಾನವೀಯ ಮೌಲ್ಯದ ದಯಾಪೂರ್ಣ ಮಾತು ಕುರಾನ್‌ನಲ್ಲಿದೆ.ಅಂತಹ ಅನುಯಾಯಿಗಳು ಹೀಗೆ ಮಾಡ್ತಾರೆ ಅಂದರೆ. ಅವರ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಪಹಲ್ಗಾಮ್ ದಾಳಿ ಭದ್ರತಾ ವೈಫಲ್ಯನಾ ಎಂಬ ಪ್ರಶ್ನೆಹೆ ಉತ್ತರಿಸಿದ ಸ್ವಾಮೀಜಿ, ಅದು ಅರಸರಿಗೆ ಸಂಬಂಧಪಟ್ಟ ವಿಷಯ.ಅದು ಆಳುವ ಅರಸರಿಗೆ ಸಂಬಂಧಪಟ್ಟ ವಿಷಯ.ಆಳುವ ಅರಸನನ್ನು ಭದ್ರತಾ ವೈಫಲ್ಯ ಪ್ರಶ್ನೆ ಮಾಡುವ ಅಧಿಕಾರ ನಮಗಿಲ್ಲ. ಅದಕ್ಕೆ ಬೇರೆ ವರ್ಗ ಇದೆ ಮಾಡ್ತಾರೆ ನಾವು ಶುಭ ಹಾರೈಸುತ್ತೇವೆ ಮೈಮೇಲೆ ಖಾವಿ ಇದೆ.ನಮ್ಮ ಜೀವನ ಬೇರೆ ಆ ಜೀವನ ಅಲ್ಲ. ನಾವು ದೇಶಕ್ಕೆ ಒಳ್ಳೆಯದಾಗಬೇಕು ರಾಷ್ಟ್ರಪ್ರೇಮ ಆಗಬೇಕು. ಭಾರತೀಯ ಪ್ರಜೆಗೆ ನೋವಾಗಬಾರದು. ಎಲ್ಲ ಕಡೆಗೂ ಸುಖ ಶಾಂತಿ ಬರಲಿ ಅಂತ ಬಯಸೋದು ನಮ್ಮ ಕರ್ತವ್ಯ ಹೊರತು.ಯಾರನ್ನೂ ಟೀಕೆ ಮಾಡುವಂತದ್ದು ನಮ್ಮದಲ್ಲ. ಲ್ಲರಿಗೂ ಒಳ್ಳೆಯದಾಗಲಿ ಒಳ್ಳೆಯ ಬುದ್ದಿ ಕೊಡಲಿ ಎಂದು ಆಶೀಸಿದರು.
4 ಸುನಾಮಿಗಳಾಗುವ ಲಕ್ಷಣಗಳಿವೆ ಎಂದ ಸ್ವಾಮೀಜಿ
ಜಗತ್ತಿನಾದ್ಯಂತ. ಜಲ ಸುನಾಮಿ, ವಾಯುಸುನಾಮಿ, ಭೂಸುನಾಮಿ,ಅಗ್ನಿಸುನಾಮಿ. ವಿಪರೀತ ಹೀಟಿನಿಂದ ಜನ ಬಾಳೋದೆ ಕಷ್ಟ. ಒಲೆ ಹತ್ತಿ ಉರಿದರೆ ನಿಲ್ಲಬಹುದು. ಧರೆ ಹತ್ತಿದರೆ ಏನು ಮಾಡೋದು. ಸಮುದ್ರ ಉಕ್ಕುತ್ತದೆ. ಗಾಳಿಯಿಂದ ಅನೇಕ ಸಾವು ನೋವಾಗುತ್ತದೆ ಎಂದರು.
ಅರಸನಾಲಯಕ್ಕೆ ಕಾರ್ಮೋಡ ಕವಿದೀತು
ಅರಸನ ಅರಮನೆಗೆ ಕಾರ್ಮೋಣ ಕವಿದೀತು.ಮತ್ತೊಮ್ಮೆ ಸಾಮೂಹಿಕ ಹತ್ಯೆಯಾಗುವ ಲಕ್ಷಣವಿದೆ*ಜಗತ್ತಿನಾದ್ಯಂತ ಈ ನಾಲ್ಕು ಸುನಾಮಿಗಳು ಎಲ್ಲವನ್ನೂ ಕಾಡುತ್ತವೆ. ನೀರು ಉಕ್ಕಿ ಬರುತ್ತದೆ ಬಿಸಿಲು ಉಕ್ಕಿ ಬರುತ್ತದೆ.ಗಾಳಿ ಉಕ್ಕಿ ಬರುತ್ತದೆ. ಬೆಂಕಿಯಿಂದ ಜನ ತತ್ತರಿಸಿ ಹೋಗ್ತಾರೆ.ಈ ವರ್ಷದಲ್ಲಿ ಒಂದು ರೋಗ ಬರುತ್ತದೆ.ಅದು ಐದು ವರ್ಷ ಇರುತ್ತದೆ,* ಅದರಿಂದ ಸಾವುನೋವು ಇದೆ ಒಳ್ಳೆಯ ಮಳೆ ಬೆಳೆಯಾಗುತ್ತದೆ ಕರ್ನಾಟಕ ಸುತ್ತಮುತ್ತ. ಅಕಾಲದಲ್ಲಿ ಮಳೆ ಬಂದಿರೋದರಿಂದ.ಮುಂದೆ ಸಕಾಲದಲ್ಲಿ ಬರುವ ಮಳೆಗಳು ಬರಬಹುದು ಬರದೆ ಇರಬಹುದು.ಜನರಲ್ಲಿ ಮತಾಂಧತೆ ಜಾತಿವಾಧ ಹೆಚ್ಚಾಗುತ್ತದೆ.ಸಾವು ನೋವು ಹೆಚ್ಚಾಗುತ್ತವೆ. ಭೂಕಂಪಗಳು ಹೆಚ್ಚಾಗುತ್ತವೆ. ಅಚ್ಚರಿಯ ದುಃಖದ ಪ್ರಸಂಗ ಭಾರತಕ್ಕೆ ಎದುರಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಭವಿಷ್ಯ
ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಮಾತಾಡಿದ ಶ್ರೀಗಳು, ಸಂಕ್ರಾಂತಿವರೆಗೆ ಯಾವ ಬದಲಾವಣೆ ದೋ಼ಷ ಕಾಡುತ್ತಿಲ್ಲ.ಇಲ್ಲಿವರೆಗೂ ರಾಜನ ಬದಲಾವಣೆ ಆಗುವ ಯಾವುದೇ ಸಾಧ್ಯತೆ ಇಲ್ಲ. ಸಂಗಮೇಶ ನಲಿವನೆ ಆದರೆ ಒಳ ಹಡ್ಡ ಬಂದಿದೆ ಬದಲಾವಣೆ ವಿಚಾರದಲ್ಲಿ.ಹೊಳೆಯನ್ನು ಈಜಿದರೆ ಬದಲಾವಣೆ ಆಗಬಹುದು. ಆ ಶಕ್ತಿ ಇದ್ರೆ.ಹಾಲುಮತದವರಿಗೆ ಅಧಿಕಾರ ಬಂದರೆ ಬಿಡಿಸಿಕೊಳ್ಳೋದು ಕಷ್ಟ.ಅವರಾಗಿಯೇ ಬಿಡಬೇಕು ಯಾಕೆಂದರೆ ವಿಜಯನಗರ ಸಾಮ್ರಾಜ್ಯ ಹಕ್ಕಬುಕ್ಕರು ಕಟ್ಟಿದ್ದು.ಇವತ್ತು ಅದೇ ಚಿಹ್ನೆ ಇರೋದು ಮೈಸೂರು ದಸರಾ ಅದೇ ಚಿಹ್ನೆಯಲ್ಲಿ ನಡಿತಿರೋದು. ಹಾಲು ಕೆಟ್ಟರು ಹಾಲುಮತ ಕೆಡೋದಿಲ್ಲ. ಆಂತವರ ಕೈಲಿ ಅಧಿಕಾರ ಸಿಕ್ಕಿರೋದರಿಂದ ಬಿಡಿಸೋದು ಕಷ್ಟ. ಅವರಾಗಿಯೇ ಬಿಟ್ರೆ ನಿಮಗೆ ಸಿಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಭವಿಷ್ಯದಲ್ಲಿ ಎರಡು ಒಂದು ಯುಗಾದಿ ಭವಿಷ್ಯ, ಇನ್ನೊಂದು ಸಂಕ್ರಾಂತಿ ಭವಿಷ್ಯ. ಯುಗಾದಿ ಭವಿಷ್ಯ ಪ್ರಕೃತಿಗೆ ಸಂಬಂಧಿಸಿದ್ದು. ಸಂಕ್ರಾಂತಿ ಭವಿಷ್ಯ ರಾಜರಿಗೆ,ದೊಡ್ಡ ದೊಡ್ಡ ವ್ಯಾಪಾರಿಗಳಿಗೆ ಹಡಗಿನಲ್ಲಿ ಬರುವಂತವರಿಗೆ ಬರುತ್ತದೆ ಎಂದರು.
ಒಟ್ಟಿನಲ್ಲಿ ಸ್ವಾಮೀಜಿ ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಉಲ್ಲೇಖಿಸಿ ಯುದ್ದ ಆಗುವ ಲಕ್ಷಣ ಇದೆ ಅಂದಿದ್ದಾರೆ. ಜೊತೆಗೆ ಪ್ರಕೃತಿ ವಿಕೋಪ, ರಾಜಕೀಯದ ಬಗ್ಗೆಯೂ ಭವಿಷ್ಯ ನುಡಿದು ಎಲ್ಲರ ಗಮನ ಸೆಳೆದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








