ಬೆಳಗಾವಿ ಅಧಿವೇಶನದಲ್ಲಿ ಜಮೀರ್ ಅಹ್ಮದ್ ವಿಕೆಟ್ ಉರುಳಲೇಬೇಕು: ಡಾ ಸಿಎನ್ ಅಶ್ವಥ್ ನಾರಾಯಣ

ಅರುಣ್​ ಕುಮಾರ್​ ಬೆಳ್ಳಿ

Updated on: Nov 18, 2023 | 5:08 PM

ಇತ್ತೀಚಿಗೆ ಮುಸ್ಲಿಂ ಸಮುದಾಯದ ಸಭೆಯೊಂದರಲ್ಲಿ ಮಾತಾಡಿದ್ದ ಜಮೀರ್, ಕಾಂಗ್ರೆಸ್ ಪಕ್ಷ ಅಲ್ಪ ಸಂಖ್ಯಾತ ಸಮುದಾಯದ ಯುಟಿ ಖಾದರ್ ಅವರನ್ನು ಸ್ಪೀಕರ್ ಆಗಿ ಆರಿಸಿರುವುದರಿಂದ ವಿರೋಧ ಪಕ್ಷಗಳ ಸದಸ್ಯರು ಅವರಿಗೆ ನಡುಬೊಗ್ಗಿಸಿ ನಮಸ್ಕರಿಸಬೇಕು ಅಂತ ಹೇಳಿ ವಿವಾದ ಸೃಷ್ಟಿಸಿದ್ದರು.

ಬೆಂಗಳೂರು: ವಸತಿ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಗೆ (BZ Zameer Ahmed Khan) ಬೆಳಗಾವಿ ವಿಧಾನ ಸಭಾ ಆಧಿವೇಶನದಲ್ಲಿ ಕಾದಿದೆಯಾ ಆಪತ್ತು? ಬಿಜೆಪಿ ನಾಯಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಹೇಳೋದನ್ನು ಕೇಳಿದರೆ ಹಾಗೆ ಅನ್ನಿಸದಿರದು. ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಅರ್ ಅಶೋಕ (R Ashoka) ತಮ್ಮನ್ನು ಭೇಟಿಯಾದ ಬಳಿಕ ಅವರೊಂದಿಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಆಶ್ವಥ್ ನಾರಾಯಣ, ಬೆಳಗಾವಿ ಅಧಿವೇಶನದಲ್ಲಿ ಜಮೀರ್ ಅಹ್ಮದ್ ನಮ್ಮ ವಿಶೇಷ ವಿಕೆಟ್, ಅದನ್ನು ತೆಗೆಯುತ್ತೇವೆ ಅಂತ ಹೇಳಿದರು. ಜಮೀರ್ ಆಡಿದ್ದು ದುರಹಂಕಾರ, ಅಜ್ಞಾನ ಮತ್ತು ವಿರೋಧ ಪಕ್ಷದ ಸದಸ್ಯರನ್ನು ಅವಮಾನಿಸುವ ಮಾತು, ಕಾಂಗ್ರೆಸ್ ಇದನ್ನು ಸಹಿಸಿಕೊಳ್ಳಬಹುದು, ಆದರೆ ಬಿಜೆಪಿ ಸಹಿಸಿಕೊಳ್ಳುವುದು ಸಾಧ್ಯವೇ ಇಲ್ಲ, ಅವರ ವಿಕೆಟ್ ಉರುಳಿಸುವುದೇ ತಮ್ಮ ಗುರಿ ಎಂದು ಬಿಜೆಪಿ ಶಾಸಕ ಹೇಳಿದರು. ಇತ್ತೀಚಿಗೆ ಮುಸ್ಲಿಂ ಸಮುದಾಯದ ಸಭೆಯೊಂದರಲ್ಲಿ ಮಾತಾಡಿದ್ದ ಜಮೀರ್, ಕಾಂಗ್ರೆಸ್ ಪಕ್ಷ ಅಲ್ಪ ಸಂಖ್ಯಾತ ಸಮುದಾಯದ ಯುಟಿ ಖಾದರ್ ಅವರನ್ನು ಸ್ಪೀಕರ್ ಆಗಿ ಆರಿಸಿರುವುದರಿಂದ ವಿರೋಧ ಪಕ್ಷಗಳ ಸದಸ್ಯರು ಅವರಿಗೆ ನಡುಬೊಗ್ಗಿಸಿ ನಮಸ್ಕರಿಸಬೇಕು ಅಂತ ಹೇಳಿ ವಿವಾದ ಸೃಷ್ಟಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.