ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲಿ ‘ಜೇಮ್ಸ್​’ ರಿಲೀಸ್​?; ಚೇತನ್​ ಕುಮಾರ್ ನೀಡಿದ್ರು ಉತ್ತರ

| Updated By: ರಾಜೇಶ್ ದುಗ್ಗುಮನೆ

Updated on: Feb 12, 2022 | 3:58 PM

ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ ಹಾಗೂ ಇತರ ಭಾಷೆಗಳಲ್ಲೂ ತೆರೆಗೆ ಬರುತ್ತಿದೆ. ಹಾಗಾದರೆ ಏಕಕಾಲಕ್ಕೆ ಎಲ್ಲ ಭಾಷೆಗಳಲ್ಲೂ ಈ ಸಿನಿಮಾ ರಿಲೀಸ್​ ಆಗಲಿದೆಯೇ? ಈ ಪ್ರಶ್ನೆಗೆ ಚಿತ್ರದ ನಿರ್ದೇಶಕ  ಚೇತನ್​ ಕುಮಾರ್ ಉತ್ತರ ನೀಡಿದ್ದಾರೆ.

ಪುನೀತ್​ ರಾಜ್​ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್​’ ಚಿತ್ರ (James Movies) ತೆರೆಗೆ ಬರೋಕೆ ಇನ್ನು ಕೆಲವೇ ವಾರಗಳು ಬಾಕಿ ಇವೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿ ಆಗಿದೆ. ಫೆಬ್ರವರಿ 11ರಂದು ರಿಲೀಸ್​ ಆದ ಟೀಸರ್​ ಸಾಕಷ್ಟು ಸದ್ದು ಮಾಡುತ್ತಿದೆ. ಪರಭಾಷೆಯ ಸ್ಟಾರ್​ಗಳು ಈ ಟೀಸರ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ ಹಾಗೂ ಇತರ ಭಾಷೆಗಳಲ್ಲೂ ತೆರೆಗೆ ಬರುತ್ತಿದೆ. ಹಾಗಾದರೆ ಏಕಕಾಲಕ್ಕೆ ಎಲ್ಲ ಭಾಷೆಗಳಲ್ಲೂ ಈ ಸಿನಿಮಾ ರಿಲೀಸ್​ ಆಗಲಿದೆಯೇ? ಈ ಪ್ರಶ್ನೆಗೆ ಚಿತ್ರದ ನಿರ್ದೇಶಕ  ಚೇತನ್​ ಕುಮಾರ್ (Chetan Kumar) ಉತ್ತರ ನೀಡಿದ್ದಾರೆ. ‘ಎರಡು ಲಿರಿಕಲ್​ ವಿಡಿಯೋ, ಒಂದು ಟ್ರೇಲರ್​ ಬಿಡುಗಡೆ ಮಾಡುತ್ತೇವೆ. ಪ್ರೀ-ರಿಲೀಸ್​ ಕಾರ್ಯಕ್ರಮ ಮಾಡುತ್ತೇವೆ. ಎಲ್ಲಾ ಭಾಷೆಗಳಲ್ಲೂ ಒಟ್ಟಿಗೆ ಸಿನಿಮಾ ರಿಲೀಸ್ ಮಾಡೋಕೆ ತಯಾರಿ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಖಂಡಿತವಾಗಿಯೂ ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲೂ ‘ಜೇಮ್ಸ್​’ ರಿಲೀಸ್​ ಆಗಲಿದೆ’ ಎಂದರು ಚೇತನ್​ ಕುಮಾರ್.

ಇದನ್ನೂ ಓದಿ: ‘ಪುನೀತ್​ ಸರ್ ಫೋಟೋ ಹಾಕಿಲ್ಲ, ತುಂಬ ಬೇಜಾರಾಯ್ತು’: ತಮ್ಮದೇ ಚಿತ್ರತಂಡದ ವಿರುದ್ಧ ವಿನೋದ್​ ಪ್ರಭಾಕರ್​ ಗರಂ

ಪುನೀತ್​ ಅಭಿನಯದ ‘ಜೇಮ್ಸ್’ ಟೀಸರ್​ ನೋಡಿ ವಿಶೇಷ ಸಾಲುಗಳನ್ನು ಬರೆದುಕೊಂಡ ನಟ ಪ್ರಭಾಸ್