ಎಲ್ಲ ಗ್ಯಾರಂಟಿಗಳನ್ನು ಕೇವಲ 6 ತಿಂಗಳಲ್ಲಿ ಜಾರಿಗೊಳಿಸಿ ದಾಖಲೆ ಮೆರೆದಿದ್ದೇವೆ: ದಿನೇಶ್ ಗುಂಡೂರಾವ್, ಸಚಿವ

|

Updated on: Jan 12, 2024 | 1:35 PM

ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಪ್ರಣಾಣಳಿಕೆಯಲ್ಲಿದ್ದ ಎಷ್ಟು ಭರವಸೆಗಳನ್ನು ಈಡೇರಿಸಿದರು ಅಂತ ಅವರನ್ನಮ್ಮೆ ಕೇಳಿದರೆ ಕಾಂಗ್ರೆಸ್ ಸರ್ಕಾರದ ಸಾಧನೆ ಗೊತ್ತಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರ ಟೀಕೆಗಳೇನೇ ಇದ್ದರೂ ತಮ್ಮ ಸರ್ಕಾರ ಜನಪರ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು.

ಮಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರ ಮಾತುಗಳನ್ನು ಕೇಳುತ್ತಿದ್ದರೆ ಬೇರೆ ರಾಜಕಾರಣಿಗಳಿಗಿಂತ ಕೊಂಚ ಭಿನ್ನ ಅನಿಸುತ್ತಾರೆ. ಯಾಕೆ ಅಂತ ಹೇಳ್ತೀವಿ ಕೇಳಿ. ಇವತ್ತು ಮಂಗಳೂರಲ್ಲಿದ್ದ ಸಚಿವ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುತ್ತಾ ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಹೇಳುವಾಗ ಪತ್ರಕರ್ತರೊಬ್ಬರು, ಸರ್ ನಿಮ್ಮದು ಸ್ಲೀಪಿಂಗ್ ಸರ್ಕಾರ (sleeping government) ಅಂತ ಬಿಜೆಪಿ ನಾಯಕರು (BJP leaders) ಪೋಸ್ಟರ್ ಗಳನ್ನು ಅಂಟಿಸಿದ್ದಾರೆ ಅಂತ ಹೇಳಿದ್ದಕ್ಕೆ ಅವರು ಉದ್ರಿಕ್ತರಾಗಲ್ಲ ಮತ್ತು ಕೋಪದಲ್ಲಿ ಪ್ರತಿಕ್ರಿಯೆ ನೀಡಲ್ಲ. ಶಾಂತವಾಗೇ ಸರ್ಕಾರದ ಸಾಧನೆ ಬಗ್ಗೆ ಹೇಳುವುದನ್ನು ಮುಂದುವರಿಸುತ್ತಾರೆ.

ಕೇವಲ 6 ತಿಂಗಳ ಅವಧಿಯಲ್ಲಿ ತಮ್ಮ ಸರ್ಕಾರ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಿ ದಾಖಲೆ ಮೆರೆದಿದೆ. ಬೇರೆ ರಾಜ್ಯಗಳಲ್ಲಿ ಹೀಗೆ ಮಾಡಲು ಕನಿಷ್ಟ 2-3 ವರ್ಷಗಳಷ್ಟು ಸಮಯ ತೆಗೆದುಕೊಳ್ಳುತ್ತಾರೆ, ಅದರೆ ನಿಮಗೆ ಹೇಗೆ ಇಷ್ಟು ಕಡಿಮೆ ಸಮಯದಲ್ಲಿ ಸಾಧ್ಯವಾಯಿತು ಕೇಂದ್ರದ ಅಧಿಕಾರಿಗಳು ತನ್ನನ್ನು ಕೇಳಿದ್ದಾರೆ, ನೆರೆರಾಜ್ಯಗಳೂ ಕೇಳಿವೆ ಎಂದು ಗುಂಡೂರಾವ್ ಹೇಳಿದರು. ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದೆ 5 ಗ್ಯಾರಂಟಿಗಳ ಅನುಷ್ಠಾನಕ್ಕೆ ತಮ್ಮ ಸರ್ಕಾರ ಪ್ರಸಕ್ತ ವರ್ಷ 32 ಸಾವಿರ ಕೋಟಿ ರೂ. ಗಳನ್ನು ತೆಗೆದಿರಿಸಿದೆ, ಮುಂದಿನ ವರ್ಷ 58 ಸಾವಿರ ಕೋಟಿ ರೂ. ಖರ್ಚಾಗಲಿದೆ ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ