ಶೆಟ್ಟರ್ ಬಿಜೆಪಿಯನ್ನು ತೆಗಳಿದ್ದು ನಂಬಿ ಅವರ ಹಿರಿತನ ಗೌರವಿಸಿ ಎಮ್ಮೆಲ್ಸಿ ಮಾಡಿದ್ದೆವು: ಡಿಕೆ ಶಿವಕುಮಾರ್
ಅವರ ಆಡಿದ ಮಾತುಗಳು ನಂಬಿ ಮತ್ತು ಹಿರಿತನಕ್ಕೆ ಗೌರವ ನೀಡಿ, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮೂಲ ಅಭ್ಯರ್ಥಿ ಸುಲಭವಾಗಿ ಗೆಲ್ಲುವ ಅವಕಾಶವಿದ್ದರೂ ಅದನ್ನು ಶೆಟ್ಟರ್ ಅವರಿಗೆ ಬಿಟ್ಟುಕೊಡಲಾಯಿತು. ಅದರೆ ಶೆಟ್ಟರ್ 35,000 ಮತಗಳ ಅಂತರದಿಂದ ಸೋತರು ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ (Jagadish Shettar) ನಿನ್ನೆ ಬಿಜೆಪಿಗೆ ವಾಪಸ್ಸು ಹೋದ ಬಳಿಕ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮೃದುವಾಗಿಯೇ ಮಾತಾಡಿದ್ದರು. ಆದರೆ ಕೆಪಿಸಿಸಿ ಕಚೇರಿಯಲ್ಲಿ (KPCC office) ಇಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರಲ್ಲಿ ಮಾತಿನಲ್ಲಿ ಕಠೋರತನ ಮತ್ತು ಅಸಮಾಧಾನವಿತ್ತು. ಕಾಂಗ್ರೆಸ್ ಪಕ್ಷವನ್ನು ಸೇರಲು ಬಂದಾಗ ಅವರು ಬಿಜೆಪಿಯ ವಿರುದ್ಧ ದೊಡ್ಡ ಆರೋಪಗಳನ್ನು ಮಾಡಿದ್ದರು, ತಮಗೆ ಅವಮಾನವಾಗಿದೆ, ನೋವಾಗಿದೆ ಅಂತ ಹೇಳಿಕೊಂಡಿದ್ದರು. ಅವರ ಆಡಿದ ಮಾತುಗಳು ನಂಬಿ ಮತ್ತು ಹಿರಿತನಕ್ಕೆ ಗೌರವ ನೀಡಿ, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮೂಲ ಅಭ್ಯರ್ಥಿ ಸುಲಭವಾಗಿ ಗೆಲ್ಲುವ ಅವಕಾಶವಿದ್ದರೂ ಅದನ್ನು ಶೆಟ್ಟರ್ ಅವರಿಗೆ ಬಿಟ್ಟುಕೊಡಲಾಯಿತು. ಅದರೆ ಶೆಟ್ಟರ್ 35,000 ಮತಗಳ ಅಂತರದಿಂದ ಸೋತರು. ಆಗಲೂ ಕಾಂಗ್ರೆಸ್ ಅವರನ್ನು ಬಿಟ್ಟುಕೊಡದೆ, ಅವರ ವಯಸ್ಸಿಗೆ ಮನ್ನಣೆ ನೀಡಿ ವಿಧಾನ ಪರಿಷತ್ ಸದಸ್ಯನಾಗಿ ನೇಮಕ ಮಾಡಿತು ಎಂದು ಶಿವಕುಮಾರ್ ಹೇಳಿದರು. ಕಳೆದ 2-3 ತಿಂಗಳಿಂದ ಅವರು ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದ ವಿಷಯ ತನ್ನ ಗಮನಕ್ಕೆ ಬಂದಿತ್ತು ಎಂದ ಅವರು, ನಿನ್ನೆ ಬೆಳಗ್ಗೆಯೂ ಅವರೊಂದಿಗೆ ಮಾತಾಡಿದ್ದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ