ನಮ್ಮ ಮುಸ್ಲಿಂ ಹೆಣ್ಣುಮಕ್ಕಳು ಓದಿ, ಸ್ವಾವಲಂಬಿಗಳಾಗಿ, ಗೌರವಾನ್ವಿತ ಬದುಕು ನಡೆಸಬೇಕು: ಶೋಭಾ ಕರಂದ್ಲಾಜೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 23, 2022 | 8:36 PM

ಮಕ್ಕಳು ಪರೀಕ್ಷೆ ಬರೆಯಬೇಕು, ಸಮಾಜದಲ್ಲಿ ಬೆಳೆಯಬೇಕು, ಸ್ವಾವಲಂಬಿಗಳಾಗಬೇಕು. ಅವರಿಗೆ ಕುಮ್ಮಕ್ಕು ನೀಡುತ್ತಿರುವ ಸಂಘಟನೆಗಳು ಮುಂದೆ ಅವರ ನೆರವಿಗೆ ಬರೋದಿಲ್ಲ, ಭಾರತದವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕೆನ್ನುವುದು ಮಾತ್ರ ಅವರ ಉದ್ದೇಶ ಎಂದು ಶೋಭಾ ಹೇಳಿದರು.

ಉಡುಪಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು (Shobha Karandlaje) ಶನಿವಾರ ಉಡುಪಿಯಲ್ಲಿ ಹಿಜಾಬ್ ಗೋಸ್ಕರ (hijab) ಪರೀಕ್ಷೆ ಬರೆಯುವುದನ್ನೂ ಬಹಿಷ್ಕರಿಸುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ (Muslim students) ಅರ್ಥಗರ್ಭಿತವಾದ ಸಲಹೆ ನೀಡಿದರು. ಯಾರದ್ದೋ ಮಾತು ಕೇಳಿಕೊಂಡು ಈ ಮಕ್ಕಳು ಪರೀಕ್ಷೆಗಳನ್ನು ಬರೆಯದಿರುವುದು ಸರಿಯಲ್ಲ. ಹಿಜಾಬ್ ಬಗ್ಗೆ ರಾಜ್ಯದ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪು, ಸರ್ಕಾರದ ಆದೇಶ ಧಿಕ್ಕರಿಸುವ ಕೆಲಸ ನಡೆಯುತ್ತಿದೆ. ಕೋರ್ಟಿನ ತೀರ್ಪಿಗೆ ವಿರುದ್ಧವಾಗಿ ಹಿಜಾಬ್ ಗೆ ಬೆಂಬಲ ನೀಡಲಾಗುತ್ತಿದೆ, ತಮ್ಮ ಮನಸ್ಸಿಗೆ ಸರಿ ಅನಿಸಿದನ್ನು ಮಾತ್ರ ಅವರು ಮಾಡುತ್ತಿದ್ದಾರೆ. ಕೋರ್ಟ್, ಸರಕಾರ, ಪೋಲಿಸ್-ಯಾರ ಬಗ್ಗೆಯೂ ಅವರಿಗೆ ಗೌರವ ಇಲ್ಲ, ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚುವ ಪ್ರಯತ್ನವೂ ನಡೆಯುತ್ತದೆ, ಇದು ಅವರ ಮಾನಸಿಕತೆಯಾಗಿದೆ. ಆದರೆ ಎಲ್ಲರೂ ಒಟ್ಟಾಗಿ ಬಾಳಬೇಕೆನ್ನುವುದು ನಮ್ಮ ಸಂಕಲ್ಪವಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ನಮ್ಮ ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕು, ಪದವಿಯ ಜೊತೆ ಗೌರವ ಗಳಿಸಬೇಕು ನೌಕರಿಗೆ ಸೇರಿ ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಬೇಕು ಅನ್ನೋದು ನಮ್ಮ ಅಪೇಕ್ಷೆಯಾಗಿದೆ. ಆದರೆ ಹಿಜಾಬ್ ವಿಷಯವನ್ನೇ ಮುಂದಿಟ್ಟುಕೊಂಡು, ಪರೀಕ್ಷೆಗಳನ್ನೂ ಬಹಿಷ್ಕರಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮತ್ತು ಭಯೋತ್ಪಾದಕ ಸಂಘಟನೆಗಳ ಸಹಾನುಭೂತಿ ಗಿಟ್ಟಿಸುವ ಹುನ್ನಾರ ನಡೆಯುತ್ತಿದೆ ಎಂದು ಶೋಭಾ ಕರಂದ್ಲಾಜೆಯವರು ಹೇಳಿದರು.

ಮಕ್ಕಳು ಪರೀಕ್ಷೆ ಬರೆಯಬೇಕು, ಸಮಾಜದಲ್ಲಿ ಬೆಳೆಯಬೇಕು, ಸ್ವಾವಲಂಬಿಗಳಾಗಬೇಕು. ಅವರಿಗೆ ಕುಮ್ಮಕ್ಕು ನೀಡುತ್ತಿರುವ ಸಂಘಟನೆಗಳು ಮುಂದೆ ಅವರ ನೆರವಿಗೆ ಬರೋದಿಲ್ಲ, ಭಾರತದವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕೆನ್ನುವುದು ಮಾತ್ರ ಅವರ ಉದ್ದೇಶ ಎಂದು ಶೋಭಾ ಹೇಳಿದರು.

ಭಾರತದಲ್ಲಿ ಎಲ್ಲರೂ ಒಂದೇ ರೀತಿಯಲ್ಲಿ ಬದುಕಬೇಕೆನ್ನುವುದು ನಾವು ಸಾರುವ ಸಂದೇಶವಾಗಿದೆ. ಪಾಕಿಸ್ತಾನದಲ್ಲಿ ಆಲ್ಪಸಂಖ್ಯಾತರ ಸ್ಥಿತಿ ಹೇಗಿದೆ ಅನ್ನೋದನ್ನು ಜನ ಅರ್ಥಮಾಡಿಕೊಳ್ಳಲಿ, ಊಟಕ್ಕಿಲ್ಲದಂಥ ಪರಿಸ್ಥಿತಿ ಅಲ್ಲಿದೆ. ಅದರೆ ನಮ್ಮ ದೇಶದಲ್ಲಿ ಆಹಾರದ ಜೊತೆ ಅವರ ಅರೋಗ್ಯವನ್ನೂ ನೋಡಿಕೊಳ್ಳಲಾಗುತ್ತಿದೆ ಎಂದು ಶೋಭಾ ಕರಂದ್ಲಾಜೆಯವರು ಹೇಳಿದರು.

ಇದನ್ನೂ ಓದಿ:   ಹಿಜಾಬ್​ಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಉಡುಪಿಯ ಎಲ್ಲಾ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆಗೆ ಗೈರು!

Published on: Apr 23, 2022 08:35 PM