ಬಿಹಾರದಲ್ಲಿ 160ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ; ಅಮಿತ್ ಶಾ ವಿಶ್ವಾಸ
ಬಿಹಾರ ಚುನಾವಣೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದು, 'ನಾವು 160 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಮತದಾರರು ಒಳನುಸುಳುವಿಕೆ ಮುಕ್ತ ರಾಜ್ಯವನ್ನು ಬಯಸುತ್ತಿದ್ದಾರೆ' ಎಂದಿದ್ದಾರೆ. ಮತದಾರರ ಪಟ್ಟಿ ತಿದ್ದುಪಡಿಗಳು ಮುಂದುವರಿಯುತ್ತವೆ. ಹೆಸರುಗಳನ್ನು ತೆಗೆದುಹಾಕುವವರು ಭಾರತೀಯ ನಾಗರಿಕರಲ್ಲ ಎಂದು ಅಮಿತ್ ಶಾ ವಾದಿಸಿದರು.
ಪಾಟ್ನಾ, ನವೆಂಬರ್ 7: ಬಿಹಾರದಲ್ಲಿ ಮೊದಲ ಹಂತದ ಮತದಾನದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಚುನಾವಣಾ ಪ್ರಚಾರದ ವೇಳೆ, “ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ 160ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಗೆಲುವು ಘೋಷಣೆಯಾಗುವುದೊಂದೇ ಬಾಕಿಯಿದೆ” ಎಂದಿದ್ದಾರೆ. “ಅಂದಾಜು 160 ಸ್ಥಾನಗಳು ಖಂಡಿತ ನಮಗೆ ಬರಲಿವೆ. ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ನಾವು ಪಡೆಯುವ ಬಗ್ಗೆ ವಿಶ್ವಾಸವಿದೆ” ಎಂದು ಹೇಳಿದ್ದಾರೆ.
“ಕಳೆದ ಬಾರಿ ನಾವು ಬಹುಮತದಿಂದ ಗೆದ್ದಿದ್ದೇವೆ. ಈ ಬಾರಿಯೂ ನಾವು ಇನ್ನೂ ಹೆಚ್ಚಿನ ಬಹುಮತದೊಂದಿಗೆ ಗೆಲ್ಲುತ್ತೇವೆ” ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ